ಸಂಪಾಜೆ, ಜು. 23: ಚೆಂಬು ಗ್ರಾಮದ ದಬ್ಬಡ್ಕ ರಸ್ತೆಯಲ್ಲಿ ಭಾನುವಾರ ಸುರಿದ ಭಾರೀ ಮಳೆಗೆ ಕಿರುಸೇತುವೆಯೊಂದು ಕುಸಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು.

ಈ ಹಿನ್ನೆಲೆ ಲೋಕೋಪಯೋಗಿ ಇಂಜಿನಿಯರ್ ಪ್ರಮೋದ್, ಪಯಸ್ವಿನಿ ಸಹಕಾರಿ ಸಂಘದ ಅಧ್ಯಕ್ಷ ಅನಂತ್ ಎನ್.ಸಿ. ಅವರ ಉಪಸ್ಥಿತಿಯಲ್ಲಿ ಗುತ್ತಿಗೆದಾರ ಪ್ರಶಾಂತ್ ಮತ್ತು ಊರವರ ಸಹಕಾರದಿಂದ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ಮತ್ತು ಪರ್ಯಾಯ ರಸ್ತೆ ನಿರ್ಮಿಸುವ ಕಾರ್ಯ ನಡೆಯಿತು. - ಶಭರೀಶ್.