ಕೂಡಿಗೆ, ಜು. 23: ಹಾಸನ-ಕುಶಾಲನಗರ ಹೆದ್ದಾರಿಯ ಕೂಡಿಗೆ-ಕಣಿವೆ ಮಧÀ್ಯದ ಕೇಂದ್ರೀಯ ನೀರು ತಪಾಸಣಾ ಕೇಂದ್ರದ ತಿರುವಿನಲ್ಲಿ ಬೈಕ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ಎರಡು ಕಾಲು ಮುರಿತಗೊಂಡಿವೆ.
ಬೈಕ್ ಸವಾರ ಸೂಳೆಕೋಟೆಯ ಅನಿಲ್ (ಕೆ.ಎ.12 ಎಲ್ 5957) ಇವರು ಕೂಡಿಗೆಯಿಂದ ಹೆಬ್ಬಾಲೆ ಕಡೆಗೆ ಹೋಗುತ್ತಿದ್ದು, ಶನಿವಾರಸಂತೆಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಪ್ರತಾಪ್ ಎಂಬವರಿಗೆ ಸೇರಿದ ಕಾರು (ಕೆಎ.09 ಝೆಡ್4106) ಡಿಕ್ಕಿಯಾಗಿವೆ.
ಕುಶಾಲನಗರ ಸಂಚಾರಿ ಪೆÇಲೀಸ್ ಠಾಣಾಧಿಕಾರಿ ಅಚ್ಚಮ್ಮ ಸೇರಿದಂತೆ ಸಿಬ್ಬಂದಿ ವರ್ಗದರು ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲು ಮಾಡಿಕೊಂಡಿದ್ದಾರೆ.