ಸೋಮವಾರಪೇಟೆ, ಜು. 23: ಸಮೀಪದ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗೆಜ್ಜೆಹಣಕೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ರೂ. 5 ಸಾವಿರ ವೆಚ್ಚದಲ್ಲಿ 1000 ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್ ವಿತರಿಸಲಾಯಿತು.

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ಮತ್ತು ಆಡಳಿತ ಮಂಡಳಿ ಮಂಡಳಿ ನಿರ್ದೇಶಕರ ಸಹಕಾರದಿಂದ ನೀಡಲಾದ ಟ್ಯಾಂಕ್‍ನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಹೇಳಿದರು.

ಈ ಸಂದರ್ಭ ಗೌಡಳ್ಳಿ ಕ್ಲಸ್ಟರ್‍ನ ಸಿಆರ್‍ಪಿ ದೇವರಾಜೇಗೌಡ, ಶಾಲಾ ಮುಖ್ಯಶಿಕ್ಷಕಿ ಹೇಮಾವತಿ, ಸಹ ಶಿಕ್ಷಕಿ ಗುಣವತಿ, ಪೊಲೀಸ್ ಇಲಾಖೆಯ ಎ.ಎಸ್.ಐ. ಗಣಪತಿ, ಪ್ರಮುಖರಾದ ರೇವಪ್ಪ, ಶೇಖರ್ ಅವರುಗಳು ಉಪಸ್ಥಿತರಿದ್ದರು.