ಕುಶಾಲನಗರ, ಜು. 23: ಕೊರೊನಾ ಸೋಂಕಿನಿಂದ ತಮ್ಮ ಹಾಗೂ ಇತರರ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ಮುನ್ನೆಚ್ಚರಿಕಾ ಕ್ರಮಗಳು ಮತ್ತು ನಿಯಮಗಳನ್ನು ರೂಪಿಸಿದರೂ ಬಹುತೇಕ ಕಡೆ ನಾಮಕಾವಸ್ಥೆಗೆ ಮಾತ್ರ ಪಾಲನೆ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಸರಕಾರಿ ಕಚÉೀರಿಗಳಲ್ಲಂತೂ ಸ್ಯಾನಿಟೈಸರ್ ಮತ್ತಿತರ ವ್ಯವಸ್ಥೆಗಳನ್ನು ಕಲ್ಪಿಸಲು ಕೆಲವು ಅಧಿಕಾರಿಗಳು ದಾನಿಗಳನ್ನು ಅವಲಂಭಿಸುವಂತಹ ಸ್ಥಿತಿ ಕೆಲವೆಡೆ ಕಾಣಬಹುದು. ಆದರೆ ಕುಶಾಲನಗರದ ಸಹಕಾರ ಸಂಘ ಸಂಸ್ಥೆಯ ಕಚೆÉೀರಿಯ ಕಟ್ಟಡದಲ್ಲಿ ಮಾತ್ರ ಸೋಂಕಿನಿಂದ ತಮ್ಮ ಸದಸ್ಯರು ಮತ್ತು ಗ್ರಾಹಕರನ್ನು ರಕ್ಷಿಸಲು ಎಲ್ಲಾ ರೀತಿಯ ಆಧುನಿಕ ವ್ಯವಸ್ಥೆಗಳನ್ನು ಕಲ್ಪಿಸಿರುವುದು ಇಲ್ಲಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಕುಶಾಲನಗರ ಬೈಪಾಸ್ ರಸ್ತೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ಗಳೊಂದಿಗೆ ನಿರ್ಮಾಣಗೊಂಡಿರುವ ಕುಶಾಲನಗರ ಕೈಗಾರಿಕಾ ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘ ತನ್ನ ಎಲ್ಲಾ ಸದಸ್ಯರಿಗೆ (1300) ಮುಖಗವಸು ವಿತರಣೆಯೊಂದಿಗೆ ಬ್ಯಾಂಕಿಗೆ ಬರುವ ಪ್ರತಿಯೊಬ್ಬ ಗ್ರಾಹಕರನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುವ ಅತ್ಯಾಧುನಿಕ ವ್ಯವಸ್ಥೆಗೆ ಒಳಪಡಿಸುವುದು, ಪ್ರತಿ ಗಂಟೆಗೊಮ್ಮೆ Pಚೇರಿಯನ್ನು ಸ್ಯಾನಿಟೈಸ್ ಮಾಡುವುದು, ಕಚೆÉೀರಿಯ ಸಿಬ್ಬಂದಿಗಳು ಕಡ್ಡಾಯ ಮಾಸ್ಕ್ ಧರಿಸುವುದು, ಇದರೊಂದಿಗೆ ಕೈಗ್ಲೌಸ್ ವ್ಯವಸ್ಥೆ, ಪಿಗ್ಮಿ ಸಂಗ್ರಹಗಾರರಿಗೆ ಕೂಡ ಎಲ್ಲಾ ರೀತಿಯ ರಕ್ಷಣಾ ವ್ಯವಸ್ಥೆ ಅಲ್ಲದೆ ಇಡೀ ಕಚೇರಿಯನ್ನು ಫಾಗ್ ಮೆಷಿನ್ ಮೂಲಕ ಸ್ಯಾನಿಟೈಸ್ ಮಾಡುವುದು ಇದು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ ಎನ್ನುತ್ತಾರೆ ಇಲ್ಲಿನ ವ್ಯವಸ್ಥಾಪಕರಾದ ಶ್ರೀಜೇಶ್.
ಪ್ರತಿ ಸದಸ್ಯರ ಮತ್ತು ಗ್ರಾಹಕರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿರುವ ಸಂಘದ ಅಧ್ಯಕ್ಷರಾದ ಟಿ.ಆರ್. ಶರವಣಕುಮಾರ್, ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಕೂಡ ಗಮನಹರಿಸಲಾಗುತ್ತಿದೆ. ಕಚೆÉೀರಿಯ ಎಲ್ಲಾ ಸಿಬ್ಬಂದಿಗಳಿಗೆ ಬೆಳಗ್ಗೆ ಮತ್ತು ಸಂಜೆ ವೇಳೆ ಆಯುರ್ವೇದ ಅಂಶಗಳನ್ನು ಒಳಗೊಂಡ ಕಷಾಯ ನೀಡಲಾಗುತ್ತಿದೆ ಎಂದಿದ್ದಾರೆ. ಕಚೆÉೀರಿಯಲ್ಲಿ ಸಾಮಾಜಿಕ ಅಂತರ ಇಟ್ಟುಕೊಂಡು ಗ್ರಾಹಕರಿಗೆ ಮತ್ತು ಸಿಬ್ಬಂದಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ‘ಶಕ್ತಿ’ ಗೆ ತಿಳಿಸಿದ್ದಾರೆ.
ಹೊರಗಿನಿಂದ ಬಂದ ವ್ಯಕ್ತಿಗಳು ಕಚೆÉೀರಿ ಪ್ರವೇಶ ಸಂದರ್ಭ ರೋಗಲಕ್ಷಣ ಕಂಡುಬಂದಲ್ಲಿ ಕೊರೊನಾ ಸೋಂಕು ಇಲ್ಲದಿರುವ ವೈದ್ಯಕೀಯ ಪ್ರಮಾಣಪತ್ರ ಪಡೆಯುವ ನಿಟ್ಟಿನಲ್ಲಿ ಕೂಡ ಕ್ರಮಕೈಗೊಳ್ಳಲಾಗುತ್ತಿದೆ. ಇ-ಸ್ಟ್ಯಾಂಪ್ ಪಡೆಯಲು ಬಂದ ಗ್ರಾಹಕರಿಗೆ ಕಚೆÉೀರಿಯ ಹೊರ ಆವರಣದಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕಚೇರಿಯಲ್ಲಿ ಸ್ವಯಂಚಾಲಿತ ಸ್ಯಾನಿಟೈಸರ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಸುಂಟಿಕೊಪ್ಪ ಶಾಖೆಯಲ್ಲಿ ಇದೇ ರೀತಿಯ ವ್ಯವಸ್ಥೆ ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.