ಮಡಿಕೇರಿ, ಜು. 23: ಕೊರೊನಾ ಸೋಂಕಿಗೆ ಒಳಗಾಗಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮುಖ್ಯ ಪೇದೆ ಲೋಕೇಶ್ ಎಂ.ಎಸ್. ಗುಣಮುಖರಾಗಿದ್ದು, ಅವರಿಗೆ ಇಂದು ಜಿಲ್ಲಾ ಪೊಲೀಸ್ ವತಿಯಿಂದ ಸ್ವಾಗತ ಕಾರ್ಯಕ್ರಮ ನಡೆಯಿತು.

ಡಿಎಸ್‍ಬಿ ನಿರೀಕ್ಷಕರಾದ ಐ.ಪಿ. ಮೇದಪ್ಪ, ಡಿಎಆರ್ ನಿರೀಕ್ಷಕರಾದ ಎಸ್. ರಾಚಯ್ಯ, ಡಿಸಿಆರ್‍ಬಿ ನಿರೀಕ್ಷಕರಾದ ಜಯರಾಮ್ ಇವರುಗಳು ಲೋಕೇಶ್ ಅವರನ್ನು ಸನ್ಮಾನಿಸಿ ಸ್ವಾಗತ ಕೋರಿದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ಕಚೇರಿಯ ಜಿಹೆಚ್‍ಎ ನಂಜಪ್ಪ, ಡಿಎಆರ್ ಉಪನಿರೀಕ್ಷಕರಾದ ಭಾನುಪ್ರಕಾಶ್ ಸೇರಿದಂತೆ ಡಿಎಆರ್. ಕಂಟ್ರೋಲ್ ರೂಂ ಹಾಗೂ ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿ ಹಾಜರಿದ್ದರು.