ಮಡಿಕೇರಿ, ಜು. 22: 50 ವರ್ಷ ಪ್ರಾಯದ ಎಂ.ಎನ್. ಕುಮಾರ್ ಎಂಬವರು ತಾ. 5 ರಂದು ಬೆಳಿಗ್ಗೆ 5.30 ಗಂಟೆಗೆ ತಮ್ಮ ಮನೆಯಿಂದ ಹೊರ ಹೋದವರು ಈವರೆಗೂ ಮನೆಗೆ ಬಂದಿರುವುದಿಲ್ಲ ಎಂದು ಅವರ ಪತ್ನಿ ರತ್ನಕುಮಾರಿ ದೂರು ನೀಡಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವ್ಯಕ್ತಿಯು ಪತ್ತೆಯಾದಲ್ಲಿ ಅಥವಾ ಅವರ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ದೂ. 08272-229000, ಮಡಿಕೇರಿ ನಗರ ಪೊಲೀಸ್ ಠಾಣೆ ದೂ. 08272-229333 ಅಥವಾ ಪೊಲೀಸ್ ವೃತ್ತ ನಿರೀಕ್ಷಕರು ಮಡಿಕೇರಿ ನಗರ ವೃತ್ತ ದೂ. 08272-229149 ಸಂಪರ್ಕಿಸಲು ಕೋರಿದೆ.