ಗೋಣಿಕೊಪ್ಪ ವರದಿ, ಜು. 22: ಬಾಬು ಜಗಜೀವನ್ ರಾಮ್ ಕಿಸಾನ್ ಸಮ್ಮಾನ್ ಪ್ರಶಸ್ತಿ ವಿಜೇತ ನಲ್ಲೂರು ಗ್ರಾಮದ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.
ನಲ್ಲೂರು ಗ್ರಾಮದಲ್ಲಿರುವ ಕೃಷಿ ಭೂಮಿಗೆ ಭೇಟಿ ನೀಡಿದ ಡೀನ್ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ವಿಸ್ತರಣಾ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿ ಜೇನು ಹುಳುಗಳಿಗೆ ಪೂರಕವಾಗಿರುವ ಬೇತ್ ಗಿಡವನ್ನು ನೀಡಿ ಕೃಷಿಗೆ ಪ್ರೋತ್ಸಾಹಿಸಿದರು. ಈ ಸಂದರ್ಭ ಕೃಷಿ ಅಧಿಕಾರಿ ತೀತಮಾಡ ಮೀರಾ ಇದ್ದರು.