ಮಡಿಕೇರಿ, ಜು. 21: ಜಿಲ್ಲೆಯಲ್ಲಿ ತಾ. 21 ರಂದು 1 ಹೊಸ ಕೊರೊನಾ ಪ್ರಕರಣ ವರದಿಯಾಗಿದೆ. ಈ ಹಿಂದೆ ತೋತೇರಿಯಲ್ಲಿ ವರದಿಯಾಗಿದ್ದ ಸೋಂಕಿತ ಪ್ರಕರಣದ ಪ್ರಾಥಮಿಕ ಸಂಪರ್ಕದಿಂದ 63 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಇದುವರೆಗೆ 282 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 210 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು 5 ಮಂದಿ ಸಾವನ್ನಪ್ಪಿದ್ದು, 67 ಪ್ರಕರಣಗಳು ಸಕ್ರಿಯವಾಗಿವೆ. ನಿಯಂತ್ರಿತ ಪ್ರದೇಶಗಳ ತೆರವು ಸೋಮವಾರಪೇಟೆಯ ಬಳಗುಂದ, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ವಸತಿಗೃಹ, ಕರಿಕೆ, ತಿತಿಮತಿಯ ಆರೋಗ್ಯ ಇಲಾಖೆಯ ವಸತಿಗೃಹ ಹಾಗೂ ಶ್ರೀಮಂಗಲದಲ್ಲಿನ ನಿಯಂತ್ರಿತ ಪ್ರದೇಶಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.