ಮಡಿಕೇರಿ, ಜು. 19: ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಘಟಕದ ನೂತನ ಕಚೇರಿ ನಿರ್ಮಾಣ ಸಂಬಂಧ ನಿವೇಶನವನ್ನು ಸಮತಟ್ಟುಗೊಳಿಸುವ ಕಾರ್ಯಕ್ಕೆ ಚಾಲನೆ ದೊರೆಯಿತು. ನಗರದ ಓಂಕಾರೇಶ್ವರ ದೇವಾಲಯ ರಸ್ತೆಯಲ್ಲಿರುವ ಹಳೆಯ ಸಿ.ವಿ.ಎಸ್. ಕಟ್ಟಡ ತೆರವುಗೊಳಿಸಿ ಬಿ.ಜೆ.ಪಿ.ಯ ನೂತನ ಸಂಕೀರ್ಣ ಕಟ್ಟಡ ನಿರ್ಮಿಸಲು ತಯಾರಿ ನಡೆದಿದೆ.
ಈ ಸಂಬಂಧ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡ ಕಾಮಗಾರಿ ಸಂಬಂಧ ಬಿ.ಜೆ.ಪಿ.ಯ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಈ ಸಂಬಂಧ ಕಟ್ಟಡದ ಕುರಿತು ಶಾಸಕರೊಂದಿಗೆ ಸಮಾಲೋಚಿಸಿದರು. ನಗರ ಪ್ರಧಾನ ಕಾರ್ಯದರ್ಶಿ ಕಾಳಚಂಡ ಅಪ್ಪಣ್ಣ, ಜಗದೀಶ್ ರೈ ಮತ್ತಿತರರು ಹಾಜರಿದ್ದರು.