ಚೆಟ್ಟಳ್ಳಿ, ಜು. 19: ಕೊಡಗಿನ ಅನಿವಾಸಿಗಳ ಸಂಘಟನೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿ ಯೇಷನ್, ಸೌದಿ ಅರೇಬಿಯಾದ ಮುಕರ್ರಮದಲ್ಲಿ ನೂತನ ವಲಯ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ರಾಷ್ಟ್ರೀಯ ಸಲಹಾ ಸಮಿತಿ ಸಂಚಾಲಕ ಅಸ್ಸಯ್ಯದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ ಅವರ ಅಧ್ಯಕ್ಷತೆಯಲ್ಲಿ ಆನ್‍ಲೈನ್ ಸಭೆ ನಡೆಯಿತು. ಸಭೆಯನ್ನು ರಾಷ್ಟ್ರೀಯ ಅಧ್ಯಕ್ಷ ಸಿದ್ದೀಖ್ ಝುಹ್ರಿ ಉದ್ಘಾಟಿಸಿದರು.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷÀನ್ ಜಿಸಿಸಿ ಮತ್ತು ಸೌದಿ ಅರೇಬಿಯ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕರೆ ವಿಷಯ ಮಂಡಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಡಾಕ್ಟರ್ ಫಹೀಂ ಕೊಟ್ಟಮುಡಿ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಕೊಳಕೇರಿ, ಕೋಶಾಧಿಕಾರಿಯಾಗಿ ಅಬ್ದುಲ್ ಸಲಾಂ ಎಮ್ಮೆಮಾಡು, ರಿಲೀಫ್ ಬೋರ್ಡ್ ಸಂಚಾಲಕರಾಗಿ ಅಬ್ದುಲ್ ರಝಾಖ್ ಗುಂಡಿಕರೆ ಆಯ್ಕೆಯಾಗಿದ್ದಾರೆ.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷÀನ್ ಸೌದಿ ಅರೇಬಿಯಾ ರಾಷ್ಟ್ರೀಯ ಕೋಶಾಧಿಕಾರಿ ಹಂಸ ಉಸ್ತಾದ್ ಚೋಕಂಡಳ್ಳಿ ನೆರವೇರಿಸಿದರು. ರಫೀಕ್ ಕೊಳಕೇರಿ ಸ್ವಾಗತಿಸಿ, ಇಸ್ಹಾಖ್ ಕುಂಜಿಲ ವಂದಿಸಿದರು.