ವೀರಾಜಪೇಟೆ, ಜು. 19: ವೀರಾಜಪೇಟೆಯ ಸಮುಚ್ಚಯ ಪೊಲೀಸ್ ಠಾಣೆಯ ಆವರಣದಲ್ಲಿ ಕೊರೊನಾ ತಪಾಸಣೆ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದ್ದು ಸಮುಚ್ಚಯ ಪೊಲೀಸ್ ಠಾಣೆಗೆ ತೆರಳುವ ಪ್ರತಿಯೊಬ್ಬರು ಸಹಾಯವಾಣಿ ಪೊಲೀಸ್ ಕೇಂದ್ರದಲ್ಲಿ ಥರ್ಮಲ್ ಸ್ಕ್ರೀನ್, ಸ್ಯಾನಿಟೈಸರ್‍ನಿಂದ ಕೈ ಶುಚಿಗೊಳಿಸಿದ ನಂತರ ಇತರ ಮಾಹಿತಿ ನೀಡಿ ಪೊಲೀಸ್ ಠಾಣೆಗಳಿಗೆ ತೆರಳಲು ಅವಕಾಶ ಮಾಡಿಕೊಡಲಾಗಿದೆ.

ಪೊಲೀಸ್ ಠಾಣೆಗೆ ಬರುವ ದೂರುದಾರರು, ಅರ್ಜಿದಾರರು ಹಾಗೂ ಇತರ ಕೆಲಸಗಳಿಗೆ ಬರುವವರು ಮೊದಲು ಪೊಲೀಸ್ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಿ ದೂರು ಅರ್ಜಿಗಳನ್ನು ಅಲ್ಲಿಯೇ ನೀಡಬೇಕು. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಲು ಸೂಚಿಸಿದಾಗ ಮಾತ್ರ ಸಂಬಂಧಿಸಿದ ಠಾಣೆಗೆ ಹೋಗಲು ಅವಕಾಶವಿದೆ. ಎರಡು ಮಂದಿಗಿಂತ ಅಧಿಕವಾಗಿ ಗುಂಪುಗೂಡಿ ಸಮುಚ್ಚಯ ಪೊಲೀಸ್ ಠಾಣೆಗೆ ಬರುವವರಿಗೆ ಪ್ರವೇಶ ನಿರಾಕರಿಸಲಾಗಿದೆ. ಸಮುಚ್ಚಯ ಪೊಲೀಸ್ ಠಾಣೆಯಲ್ಲಿರುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ಪ್ರತಿನಿತ್ಯ ಅಗತ್ಯವಾಗಿ ಮಾಡಲು ಸೂಚಿಸಿದಾಗ ಮಾತ್ರ ಸಂಬಂಧಿಸಿದ ಠಾಣೆಗೆ ಹೋಗಲು ಅವಕಾಶವಿದೆ. ಎರಡು ಮಂದಿಗಿಂತ ಅಧಿಕವಾಗಿ ಗುಂಪುಗೂಡಿ ಸಮುಚ್ಚಯ ಪೊಲೀಸ್ ಠಾಣೆಗೆ ಬರುವವರಿಗೆ ಪ್ರವೇಶ ನಿರಾಕರಿಸಲಾಗಿದೆ. ಸಮುಚ್ಚಯ ಪೊಲೀಸ್ ಠಾಣೆಯಲ್ಲಿರುವ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ಪ್ರತಿನಿತ್ಯ ಅಗತ್ಯವಾಗಿ ಈ ವಸತಿ ಗೃಹದ ಕಾಲೋನಿಯಲ್ಲಿ ಸುಮಾರು 150 ಮಂದಿ ಕುಟುಂಬ ಸದಸ್ಯರುಗಳಿದ್ದಾರೆ. ಸಹಾಯವಾಣಿ ಕೇಂದ್ರದಲ್ಲಿ ತಪಾಸಣೆಯ ಮಾಹಿತಿಯನ್ನು ದಾಖಲಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಡಿ.ವೈ.ಎಸ್.ಪಿ. ಸಿ.ಟಿ. ಜಯಕುಮರ್ ಅವರ ನಿರ್ದೇಶನದಲ್ಲಿ, ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ಮಾರ್ಗದರ್ಶನದಲ್ಲಿ ಸಬ್‍ಇನ್ಸ್‍ಪೆಕ್ಟರ್ ಬೋಜಪ್ಪ, ಸಿಬ್ಬಂದಿಗಳು ಸಹಕಾರದಿಂದ ಸಹಾಯವಾಣಿ ಕೇಂದ್ರವನ್ನು ಕೊರೊನಾ ವೈರಸ್ ಮುಂಜಾಗರೂ ಕ್ರಮವಾಗಿ ಆರಂಭಿಸಲಾಗಿದ್ದು ಒಬ್ಬ ಎ.ಎಸ್.ಐ., ಹೆಡ್ ಕಾನ್ಸ್‍ಟೆಬಲ್, ಹೋಮ್ ಗಾರ್ಡ್ ಹಾಗೂ ಪೊಲೀಸ್ ಕಾನ್ಸ್‍ಟೇಬಲ್ ಸೇರಿದಂತೆ ನಾಲ್ಕು ಮಂದಿ ಈ ಪೊಲೀಸ್ ಸಹಾಯವಾಣಿ ಕೇಂದ್ರದಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.