ವೀರಾಜಪೇಟೆ, ಜು. 16 : ವೀರಾಜಪೇಟೆ ಬಳಿಯ ಒಂದನೇ ಪೆರುಂಬಾಡಿಯ ಹತ್ತು ಮನೆಗಳಿರುವ 35 ಜನಸಂಖ್ಯೆ ಇರುವ ಹಾಗೂ ಒಂದು ಮಸೀದಿ, 7 ಅಂಗಡಿಗಳಿರುವ ಪ್ರದೇಶವನ್ನು ಸೀಲ್‍ಡೌನ್ ಮಾಡಿ ರಸ್ತೆಗೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕ ಸಂಪರ್ಕವನ್ನು ತಡೆ ಹಿಡಿಯಲಾಗಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ 27 ವರ್ಷದ ಯುವಕನೊಬ್ಬ ಪೆರುಂಬಾಡಿಯ ತವರು ಮನೆಗೆ ಬಂದಿದ್ದು ಆತನ ಗಂಟಲ ದ್ರವನ್ನು ತಪಾಸಣೆಗೆ ಕಳುಹಿಸಿದಾಗ ಕೊರೊನಾ ಪಾಸಿಟಿವ್ ಬಂದುದರಿಂದ ಆತನನ್ನು ಬಾಳುಗೋಡಿನ ಏಕಲವ್ಯ ಶಾಲೆಯಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿರುವುದಾಗಿ ತಾಲೂಕು ಆಡಳಿತ ತಿಳಿಸಿದೆ.
ಸೀಲ್‍ಡೌನ್ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಬೋಜಪ್ಪ, ಸಿಬ್ಬಂದಿಗಳು ಕಂದಾಯ ಇಲಾಖೆಯ ನಿರೀಕ್ಷಕರಾದ ಪಳಂಗಪ್ಪ ಪ್ರಕಾಶ್, ತಾಲೂಕು ಆರೋಗ್ಯ ತಂಡ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತಿತರರು ಹಾಜರಿದ್ದರು.