ಮಡಿಕೇರಿ, ಜು. 15: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸರ್ವ ಸದಸ್ಯರ ಸಭೆ ನಡೆಯಿತು.
ಸರ್ಕಾರ ಇತ್ತೀಚೆಗೆ ನೂತನ ಸದಸ್ಯರನ್ನು ನೇಮಕ ಮಾಡಿದ್ದು, ನೂತನ ಸದಸ್ಯರಾದ ಡಾ.ಕೂಡಕಂಡಿ ಸಿ.ದಯಾನಂದ, ಎ.ಟಿ.ಕುಸುಮಾದರ, ಡಾ.ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ ಇವರುಗಳು ಸದಸ್ಯತ್ವ ಸ್ವೀಕರಿಸಿದರು.
ರಾಜೀನಾಮೆ: ಮತ್ತೊಬ್ಬ ಸದಸ್ಯರಾಗಿ ನೇಮಕವಾಗಿದ್ದ ಭಾರತಿ ರಮೇಶ್ ಅವರು ಕಾರಣಾಂತರದಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಸದಸ್ಯರಾದ ಬೈತಡ್ಕ ಜಾನಕಿ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಆನಂದ್ ದಂಬೆಕೋಡಿ, ಅರ್ಥ ಸದಸ್ಯರಾದ ಕೆ.ಟಿ.ದರ್ಶನ್ ಇತರರು ಇದ್ದರು ಎಂದು ರಿಜಿಸ್ಟ್ರಾರ್ ಚಿನ್ನಸ್ವಾಮಿ ತಿಳಿಸಿದ್ದಾರೆ.