ಮಡಿಕೇರಿ, ಜು. 15: ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒಂದನೇ ಪೆರಂಬಾಡಿಯ ಸರ್ಕಾರಿ ತೋಡಿನಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ ನಗರ ಠಾಣಾಧಿಕಾರಿ ಭೋಜಪ್ಪ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಅಕ್ರಮವಾಗಿ ಮರಳು ಕದ್ದು ಸಾಗಿಸಲು ಯತ್ನಿಸುತ್ತಿದ್ದ ಮಹೇಂದ್ರ ಜೀತೊ ವಾಹನ (ಕೆ.ಎ. 12 ಬಿ. 3237) ಹಾಗೂ ಮರಳು ಕಳ್ಳತನ ಮಾಡುತ್ತಿದ್ದ ಪೆರಂಬಾಡಿಯ ನಿವಾಸಿಗಳಾದ ಇಸ್ಮಾಯಿಲ್ ಹಾಗೂ ನಿಸಾರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಭೋಜಪ್ಪ, ಸಿಬ್ಬಂದಿಗಳಾದ ಗೀತಾ, ಮುಸ್ತಾಫ, ಗಿರೀಶ್, ಮುನೀರ್, ಸಂತೋಷ್, ಚಾಲಕ ಯೋಗೇಶ್ ಪಾಲ್ಗೊಂಡಿದ್ದರು.