ಕಳೆದ ಸೆಪ್ಟೆಂಬರ್‍ನಲ್ಲಿ ಸುಂಟಿಕೊಪ್ಪ ನಿವಾಸಿ ಅಂಚೆ ಇಲಾಖೆಯ ಅಧಿಕಾರಿ ನಿಡ್ಯಮಲೆ ಅಶೋಕ ಅವರ ಪತ್ನಿ ಶಿಕ್ಷಕಿ ಹೇಮಾವತಿ ಅವರ ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಸುಳ್ಯದ ಬಳಿ ಕಾರು ಅವಘಡಕ್ಕೀಡಾಗಿ ಮರಣ ಹೊಂದಿದ್ದರು. ಅವರ ಇನ್ನೋರ್ವ ಪುತ್ರಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಅವಳನ್ನು ನೋಡಲು ತೆರಳಿದ ಸಂದರ್ಭ ಅಪಘಾತ ಸಂಭವಿಸಿತ್ತು. ಇದೀಗ ಅವರ ಪುತ್ರಿ ಪ್ರಕೃತಿ ಶೇ. 92 ಅಂಕಗಳಿಸುವ ಮೂಲಕ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.