ಮಡಿಕೇರಿ ಜು.13 : ಜಿಲ್ಲೆಯಲ್ಲಿ ತಾ.13ರಂದು ಹೊಸದಾಗಿ 15 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಸೋಂಕಿತ ಪ್ರಕರಣಗಳು 184 ಆಗಿದ್ದು ಸಕ್ರಿಯ ಪ್ರಕರಣಗಳು 112ಕ್ಕೆ ಏರಿದೆ. ಒಟ್ಟು 69 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಬಿಡುಗಡೆಗೊಂಡಿರುತ್ತಾರೆ. ಈವರೆಗೆ 3 ಮಂದಿ ಮೃತಪಟ್ಟಿರುತ್ತಾರೆ. ಜಿಲ್ಲೆಯಲ್ಲಿ ಪ್ರಸ್ತುತ 77 ನಿಯಂತ್ರಿತ ಪ್ರದೇಶಗಳಿವೆ.
ತಾ.13 ರಂದು ಪತ್ತೆಯಾದ ಹೊಸ ಪ್ರಕರಣಗಳ ವಿವರಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದ 36 ವರ್ಷದ ಪುರುಷ, ಕಾರೆಕೊಪ್ಪದ 41 ವರ್ಷದ ಮಹಿಳೆ, ಕಕ್ಕೆಹೊಳೆಯ 25 ವರ್ಷದ ಮಹಿಳೆ, ಶನಿವಾರಸಂತೆ ಹೋಬಳಿ ಗೋಪಾಲಪುರದ 25 ವರ್ಷದ ಪುರುಷ, ಚೇರಳ ಶ್ರೀಮಂಗಲದ 62 ವರ್ಷದ ಪುರುಷ, ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆಯ 59 ವರ್ಷದ ಪುರುಷ, ಕುಶಾಲನಗರದ, ಬೈಚನಹಳ್ಳಿಯ 25 ವರ್ಷದ ಪುರುಷ, ಕುಶಾಲನಗರದ ಕೋಣಮಾರಿ ಯಮ್ಮ ದೇವಸ್ಥಾನ ಬಳಿಯ 56 ವರ್ಷದ ಮಹಿಳೆ, ಕುಶಾಲನಗರದ ಬಲಮುರಿ ದೇವಸ್ಥಾನ ಬಳಿಯ 36 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಈ ಎಲ್ಲ ಪ್ರಕರಣಗಳಲ್ಲಿ, ವ್ಯಕ್ತಿಗಳಿಗೆ ಜ್ವರದ ಲಕ್ಷಣಗಳಿದ್ದುದರಿಂದ ಪರೀಕ್ಷೆ ನಡೆಸಿದ್ದು ಸೋಂಕು ದೃಢಪಟ್ಟಿದೆ.
ಶನಿವಾರಸಂತೆ ಹೋಬಳಿ, ಗೋಪಾಲಪುರ ನಿವಾಸಿ ಬೆಂಗಳೂರು ಪ್ರಯಾಣದ ಇತಿಹಾಸವಿರುವ 24 ವರ್ಷದ ಪುರುಷ, ತೊರೆನೂರು ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 85 ವರ್ಷದ ಮಹಿಳೆ ಸೇರಿದಂತೆ ಚೆಟ್ಟಳ್ಳಿ ಗ್ರಾಮದ ಕಂಡಕೆರೆ ಆರೋಗ್ಯ ಕಾರ್ಯಕರ್ತ ರೊಬ್ಬರ 18 ವರ್ಷದ ಮಗನಿಗೆ ಸೋಂಕು ದೃಢಪಟ್ಟಿದೆ.
ವೀರಾಜಪೇಟೆ : ಪಾಲಿಬೆಟ್ಟ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 22 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಗೋಣಿಕೊಪ್ಪದ ಅರವತ್ತೊಕ್ಲುವಿನ ಮೈಸೂರಮ್ಮ ಕಾಲೋನಿಯ 18 ವರ್ಷದ ಹುಡುಗನೊಬ್ಬನಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿ : ನಗರದ ಗದ್ದುಗೆ ಬಳಿಯ 28 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರಿಗೆ ಜ್ವರದ ಲಕ್ಷಣವಿದ್ದು, ಪರೀಕ್ಷೆ ನಡೆಸಿದ್ದು, ಸೋಂಕು ದೃಢಪಟ್ಟಿದೆ.
ಹೊಸದಾಗಿ 12 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ
ಸೋಮವಾರಪೇಟೆ : ನೀರುಗುಂದ, ಕಾರೆಕೊಪ್ಪ, ಕಕ್ಕೆಹೊಳೆ, ಗೋಪಾಲಪುರ, ಚೇರಳ ಶ್ರೀಮಂಗಲ, ಎಮ್ಮೆಗುಂಡಿ ರಸ್ತೆ - ಸುಂಟಿಕೊಪ್ಪ, ಕುಶಾಲನಗರದ ಬೈಚನಹಳ್ಳಿ, ಬಲಮುರಿ ದೇವಸ್ಥಾನ ಬಳಿ, ಹಾಗೂ ಕೋಣ ಮಾರಿಯಮ್ಮ ದೇವಸ್ಥಾನ, ಚೆಟ್ಟಳ್ಳಿಯ ಕಂಡಕೆರೆ.
ವೀರಾಜಪೇಟೆ : ಗೋಣಿಕೊಪ್ಪದ ಅರವತ್ತೋಕ್ಲುವಿನ ಮೈಸೂರಮ್ಮ ಕಾಲೋನಿ
ಮಡಿಕೇರಿ : ಗದ್ದುಗೆ
ನಿಯಂತ್ರಿತ ಪ್ರದೇಶಗಳ ತೆರವು : ನೆಲ್ಲಿಹುದಿ ಕೇರಿಯ ಬೆಟ್ಟದಕಾಡು, ಚೆನ್ನಯ್ಯನ ಕೋಟೆಯ ಹೊಲಮಾಳ ಹಾಗೂ ಪಾಲಿಬೆಟ್ಟ, ಈ ಮೂರು ನಿಯಂತ್ರಿತ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.