ವೀರಾಜಪೇಟೆ, ಜು. 13 : ವೀರಾಜಪೇಟೆಯ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಸಂಘದಿಂದ ರಾಜ್ಯದ ಮುಖ್ಯಮಂತ್ರಿ ಕೋವಿಡ್ ಫಂಡ್‍ಗೆ ರೂ. 2 ಲಕ್ಷದ ಚೆಕ್‍ನ್ನು ಸಂಘದ ಅಧ್ಯಕ್ಷ ಕೋಡಿರ ಎಂ. ಪ್ರವೀಣ್ ಚಂಗಪ್ಪ ಆಡಳಿತ ಮಂಡಳಿ ಪರವಾಗಿ ಶಾಸಕ ಕೆ.ಜಿ.ಬೋಪಯ್ಯ ಅವರ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ನಿರ್ದೇಶಕರುಗಳು ಹಾಜರಿದ್ದರು.