ಮತ್ತೊಂದೆಡೆ ಯಡವಟ್ಟಿದೆ!!

ಮಡಿಕೇರಿ, ಜು. 13: ಮಡಿಕೇರಿ ನಗರಸಭೆಯ ವೆಬ್‍ಸೈಟ್‍ನಲ್ಲಿ ಚೆನ್ನಪಟ್ಟಣ ನಗರದ ಮಾಹಿತಿ ಸೇರಿದಂತೆ ಚೆನ್ನಪಟ್ಟಣದ ನಕ್ಷೆ ಪ್ರದರ್ಶಿಸುತ್ತಿದ್ದುದರ ಕುರಿತು ‘ಶಕ್ತಿ’ ವರದಿ ಪ್ರಕಟಿಸಿತ್ತು. ಇದಕ್ಕೆ ತಕ್ಷಣವೇ ಸ್ಪಂದನ ದೊರಕಿದ್ದು ಇದೀಗ ಸರಿಪಡಿಸಲಾಗಿದೆ. ಮಡಿಕೇರಿ ನಗರದ್ದೇ ಮಾಹಿತಿ ಸೇರಿದಂತೆ ನಕ್ಷೆ ಕೂಡ ಪ್ರದರ್ಶಿಸಲಾಗಿದೆ. ಆದರೆ ವೆಬ್‍ಸೈಟ್ ಮೇಲ್ಭಾಗದಲ್ಲಿ ಟ್ವಿಟರ್ ಲಿಂಕ್ ಇದ್ದು, ಇದನ್ನು ಕ್ಲಿಕ್ ಮಾಡಿದರೆ, ಬಳ್ಳಾರಿಯ ಆಯುಕ್ತರ ಟ್ವಿಟರ್ ಖಾತೆ ತೆರೆಯುತ್ತದೆ. ಬಳ್ಳಾರಿಯವರೆಲ್ಲ ಆದಷ್ಟು ಬೇಗ ತೆರಿಗೆ ಪಾವತಿಸಿ ಎಂದು ಖಾತೆಯ ಮುಖಾಂತರ ಮನವಿ ಮಾಡಲಾಗಿದೆ. ನಗರಸಭೆ ಈ ಸಂಬಂಧ ಗಮನಹರಿಸಿ. - ಪ್ರಜ್ವಲ್