ಕುಶಾಲನಗರ, ಜು. 13: ಕುಶಾಲನಗರ ಪಟ್ಟಣದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸರಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ಸಂಪೂರ್ಣ ಸ್ಯಾನಿಟೈಸ್‍ಗೆ ಒಳಪಡಿಸಲಾಗಿದೆ. 3 ದಿನಗಳ ಕಾಲ ತುರ್ತು ರೋಗಿಗಳ ಹೊರತುಪಡಿಸಿ ಯಾವುದೇ ಸೇವೆ ಲಭ್ಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.