ಶ್ರೀಮಂಗಲ, ಜು. 13: ಬ್ರಹ್ಮಗಿರಿ ಅಭಯಾರಣ್ಯದ ಶ್ರೀಮಂಗಲ ವಲಯ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆ ಆಡಿದ ಆರೋಪದ ಹಿನ್ನೆಲೆ ಕೋವಿ ಸಹಿತ ಇಬ್ಬರು ಆರೋಪಿಗಳನ್ನು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವಿರೇಂದ್ರ ಮರಿ ಬಸಣ್ಣವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬೋಪಯ್ಯ ಮತ್ತು ನಂಬಿ ಎಂಬ ಇಬ್ಬರು ಆರೋಪಿಗಳನ್ನು ಕೋವಿ ಸಹಿತ ಬೇಟೆಯಾಡಿದ ಕೂರ ಹಂದಿಯನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿ ಬಸಣ್ಣವರ್ ನೇತೃತ್ವದ ತಂಡದಲ್ಲಿ, ಡಿ.ಆರ್.ಎಫ್.ಓ.ಗಳಾದ ಲಿಂಗಪ್ಪ, ಹರೀಶ್ ಕುಮಾರ್, ಗಾರ್ಡ್ ನಂದೀಶ್, ಸಿಬ್ಬಂದಿ ಎಸ್.ಎಸ್. ಹರೀಶ್, ಪ್ರವೀಣ್ ಪಾಲ್ಗೊಂಡಿದ್ದರು.