ನಾಪೆÇೀಕ್ಲು, ಜು. 11: ಈ ಬಾರಿ ಮಳೆ ಬಿರುಸುಗೊಳ್ಳುವುದಕ್ಕೂ ಮುನ್ನವೇ ರೋಬಸ್ಟಾ ಕಾಫಿ ಉದುರುತ್ತಿದ್ದು, ನಾಪೆÇೀಕ್ಲು ವ್ಯಾಪ್ತಿಯ ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸುವಂತಾಗಿದೆ.
ಪ್ರತೀ ವರ್ಷ ಈ ವ್ಯಾಪ್ತಿಯಲ್ಲಿ ಮುಂಗಾರು ಆರಂಭದಲ್ಲಿಯೇ ಬಿರುಸಿನ ಗಾಳಿ, ಮಳೆಯ ಕಾರಣದಿಂದಾಗಿ ಕಾಫಿ, ಒಳ್ಳೆಮೆಣಸು, ಅಡಿಕೆ ಬೆಳೆಗಳು ಕೊಳೆರೋಗಕ್ಕೆ ತುತ್ತಾಗಿ ನಷ್ಟ ಸಂಭವಿಸುವದು ವಾಡಿಕೆ. ಆದರೆ, ಪ್ರಸ್ತುತ ಈ ಬಾರಿ ಬಿರುಸಿನ ಮಳೆಯೂ ಸುರಿದಿಲ್ಲ. ಗಾಳಿಯೂ ಬೀಸಿಲ್ಲ, ವರತೆ ಕಾಣಿಸಿಕೊಳ್ಳಲೇ ಇಲ್ಲ. ಹಳ್ಳಕೊಳ್ಳ, ಕೊಲ್ಲಿ, ಹೊಳೆ, ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಲೇ ಇಲ್ಲ. ಪ್ರವಾಹ ಬಂದೇ ಇಲ್ಲ. ಆದರೂ ಕಾಫಿ ಫಸಲು ಮಾತ್ರ ಕೊಳೆ ರೋಗದಿಂದ ಉದುರುತ್ತಿರುವದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ತೀವ್ರ ಪ್ರಮಾಣದ ಮಳೆಗೆ ಮುನ್ನವೇ ಕಾಫಿ ಉದುರುತ್ತಿರುವದರಿಂದ ವರ್ಷಂಪ್ರತಿ ಸುರಿಯುವ ಮಳೆ ಮುಂದೆ ಸುರಿದರೆ ಈ ಭಾಗದಲ್ಲಿ ಕಾಫಿ ಫಸಲು ಉಳಿಯಲಿದೆಯೇ ಎಂಬ ಆತಂಕ ಬೆಳೆಗಾರರಲ್ಲಿ ಉಂಟಾಗಿದೆ. ಕಾಫಿಗೆ ಕೊಳೆರೋಗ ಬರುವದರೊಂದಿಗೆ ಕಾಳುಮೆಣಸು ಬಳ್ಳಿಗಳು ಕೂಡ ಹಳದಿ ರೋಗದಿಂದ ಸಾಯುತ್ತಿರುವದು ಕಂಡು ಬರುತ್ತಿದೆ. -ಪಿ.ವಿ.ಪ್ರಭಾಕರ್