ವೀರಾಜಪೇಟೆ, ಜು. 11: ಮಲೆನಾಡು ಪ್ರದೇಶವಾದ ಕೊಡಗಿನ ಜೇನು ಗುಣ ಮಟ್ಟದಲ್ಲಿ ಹಾಗೂ ಮಾರಾಟದಲ್ಲಿ ರಾಷ್ಟ್ರ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತನ್ನ ಖ್ಯಾತಿಯನ್ನು ಸಾಧಿಸಿ ಹೆಸರನ್ನು ಉಳಿಸಿ ಕೊಂಡಿದೆ. ಸಹಕಾರ ಸಂಘಗಳು ಮುಂದೆಯೂ ಇದೇ ಗುಣಮಟ್ಟವನ್ನು ಕಾಪಾಡಿಕೊಂಡು ಮುಂದಿನ ದಿನಗಳಲ್ಲಿಯೂ ಇದರ ಖ್ಯಾತಿಯನ್ನು ಉಳಿಸಿಕೊಂಡು ಸಾಧನೆ ಮಾಡುವಂತಾಗಲಿ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.ವೀರಾಜಪೇಟೆಯಲ್ಲಿರುವ ಕೊಡಗು ಜೇನು ಮತ್ತು ಮೇಣ ಉತ್ಪಾದಕರÀ ಸಹಕಾರ ಮಾರಾಟ ಸಂಘ ದ ವತಿಯಿಂದ ನಾಲ್ಕು ಕೋಟಿ ವೆಚ್ಚದಲಿ ್ಲಇಲ್ಲಿನ ಮಲಬಾರ್ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಸ್ವಾಮಿ ಶಾಂಭವನಂದಾಜಿ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹಿಂದಿನ ಜೇನು ಕೃಷಿಯ ಹಿರಿಯರ ಪರಿಶ್ರಮದಿಂದ ಇಂತಹ ಸಹಕಾರ ಸಂಘಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಗತಿ ಕಾಣಲು ಸಹಕಾರಿಯಾಗಿದೆ. ದೇಶದ ಸಹಕಾರ ಕೇತ್ರದಲ್ಲಿ ಕೊಡಗು ಜಿಲ್ಲೆ ಮಾದರಿಯಾಗಿ ಅಚ್ಚುಕಟ್ಟಿನ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೂ ಬಿಡುವ ಮರಗಳಿಲ್ಲದ ಕಾರಣ ಜೇನು ಕೃಷಿ ಸ್ವಲ್ಪ ಮಟ್ಟಿಗೆ ಕ್ಷೀಣಿಸುತ್ತಿದೆ. ಇಂದಿನ ಜೇನು ಕೃಷಿಕರ ಮನೆಯಲ್ಲಿ ಹೂವಿನ ಗಿಡಗಳನ್ನು ನಿರಂತರವಾಗಿ ಬೆಳೆಸುವುದರಿಂದ ಜೇನು ಕೃಷಿಗೆ ಉತ್ತೇಜನ ನೀಡಬಹುದಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೋಡಿರ ಎಂ. ಪ್ರವೀಣ್ ಚಂಗಪ್ಪ ಮಾತನಾಡಿ ಜೇನು ಮತ್ತು ಉತ್ಪಾದಕರ

(ಮೊದಲ ಪುಟದಿಂದ) ಸಂಘ 1936ರಲ್ಲಿ ಶಾಂಭವನಂದಾಜಿ ಅವರ ನೇತೃತ್ವದಲ್ಲಿ ಕೇವಲ 53 ಸದಸ್ಯರುಗಳಿಂದ ಸ್ಥಾಪನೆಗೊಂಡು ಇಂದು 1511 ಸದಸ್ಯರುಗಳನ್ನು ಹೊಂದಿರುತ್ತದೆ. ಜೇನು ಕೃಷಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಘದ ಸದಸ್ಯರುಗಳಿಗೆ ರಿಯಾಯಿತಿ ದರದಲ್ಲಿ ಜೇನು ಪೆಟ್ಟಿಗೆಗಳನ್ನು ವಿತರಿಸಿ ಉತ್ಪಾದಿಸಿದ ಜೇನನ್ನು ಹೆಚ್ಚಿನ ಬೆಲೆಯಲ್ಲಿ ಖರೀದಿಸಿ ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗುಣಮಟ್ಟದ ಪರೀಕ್ಷೆಗೆ ಕಳುಹಿಸಿ ಉತ್ತಮ ಗುಣಮಟ್ಟದ ಜೇನು ಎಂದು ದೃಢೀಕರಣಗೊಂಡ ನಂತರ ಒಂದು ಕೆ.ಜಿ., 500 ಗ್ರಾಂ, 200 ಹಾಗೂ 100 ಗ್ರಾಂ ಬಾಟಲುಗಳಲ್ಲಿ ಆಗ್ ಮಾರ್ಕ್ ಮುದ್ರೆಯೊಂದಿಗೆ ಮಾರಾಟಕ್ಕೆ ಬಿಡಲಾಗುವುದು.

ಗೋಣಿಕೊಪ್ಪದ ಸಂಘದ ಶಾಖೆಯಲ್ಲಿಯೂ ಜೇನು ಮಾರಾಟಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಈಗ ಇಲ್ಲಿನ ಮಲಬಾರ್ ರಸ್ತೆಯಲ್ಲಿ ಸ್ವಾಮಿ ಶಾಂಭವಾನಂದಾಜಿಯವರ ವಾಣಿಜ್ಯ ಸಂಕೀರ್ಣದಲ್ಲಿ 6 ವ್ಯಾಪಾರ ಮಳಿಗೆಗಳು, 14 ಮನೆಗಳು, ಬಾಡಿಗೆಗಿರುವ ಒಂದು ಗೋದಾಮು ಒಳಗೊಂಡಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಮಾದಂಡ ಎಸ್.ಪೂವಯ್ಯ, ಕೆ.ಮಂದಣ್ಣ, ಎಂ.ಎಂ.ಬನ್ಸಿ ಪೂವಣ್ಣ ಹಾಗೂ ಚಿರಿಯಪಂಡ ರಾಜಾ ನಂಜಪ್ಪ ಇವರುಗಳಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಸಂಘಕ್ಕಾಗಿ 1936 ರಿಂದ ಇಲ್ಲಿಯ ತನಕ ದುಡಿದ ಮಾಜಿ ಅಧ್ಯಕ್ಷರುಗಳನ್ನು ಸ್ಮರಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ನುಚ್ಚಿಮಣಿಯಂಡ ಚಂಗಪ್ಪ, ಸಂಘದ ನಿರ್ದೇಶಕರುಗಳು, ಸದಸ್ಯರುಗಳು, ಸಂಘದ ವ್ಯವಸ್ಥಾಪಕ ಕೋಣಿಯಂಡ ತಿಮ್ಮಯ್ಯ, ಸಿಬ್ಬಂದಿಗಳು ಹಾಜರಿದ್ದರು.