ಮಡಿಕೇರಿ, ಜು. 10: ಸರಕಾರದ ಆದೇಶದಂತೆ ಅಬಕಾರಿ ಇಲಾಖೆಯ ಬಿ ಮತ್ತು ಸಿ ವೃಂದದ ಅದಿಕಾರಿ, ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಲಾಗಿದ್ದು, ವೀರಾಜಪೇಟೆ ವಲಯ ಅಬಕಾರಿ ಉಪನರೀಕ್ಷಕ ಹೆಚ್.ಜಿ. ಶ್ರೀನಿವಾಸ್ ಅವರನ್ನು ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿಗೆ ವರ್ಗಾವೆಣೆ ಮಾಡಲಾಗಿದೆ.