ಮಡಿಕೇರಿ, ಜು. 10: ಮೂರ್ನಾಡು ಸಮೀಪದ ಹೊದ್ದೂರುವಿನ 54 ವರ್ಷದ ವ್ಯಕ್ತಿಯೊಬ್ಬರು ತಾ. 6 ರಂದು ಸಾವನ್ನಪ್ಪಿದ್ದು, ತಾ. 7 ರಂದು ಮುಂಜಾಗ್ರತಾ ಕ್ರಮದೊಂದಿಗೆ ಜಿಲ್ಲಾಡಳಿತದಿಂದ ಕೋವಿಡ್ -19ರ ನಿಯಮದಂತೆ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಕೊರೊನಾ ಸಂಬಂಧ ಪ್ರಯೋಗಾಲಯದ ವರದಿಯಲ್ಲಿ ಮೃತ ವ್ಯಕ್ತಿಗೆ ‘ನೆಗೆಟಿವ್’ ಕಂಡು ಬಂದಿದೆ.ತಾ. 5 ರಂದು ಮಡಿಕೇರಿ ಪುಟಾಣಿ ನಗರದ 55 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮದೊಂದಿಗೆ ಅಂತ್ಯಸಂಸ್ಕಾರ ಕೈಗೊಂಡಿತ್ತು. ಈ ವ್ಯಕ್ತಿಗೂ ಪ್ರಯೋಗಾಲಯ ವರದಿಯಿಂದ ‘ನೆಗೆಟಿವ್’ ಗೋಚರಿಸಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಕುಶಾಲನಗರ ದಂಡಿನಪೇಟೆಯ 50 ವರ್ಷದ ವ್ಯಕ್ತಿ ಮಾತ್ರ ಇದುವರೆಗೆ ಮೃತಪಟ್ಟಿರುವದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆ.