ಮಡಿಕೇರಿ, ಜು. 8: ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಆದೇಶದಂತೆ ಜಿಲ್ಲೆಯಲ್ಲಿರುವ ಎಲ್ಲ ಹೊಟೇಲ್‍ಗಳು, ವಸತಿ ಗೃಹಗಳ ಮಾಹಿತಿಯನ್ನು ಕೇಂದ್ರ ಸರಕಾರದ hoಣeಟಛಿಟouಜ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಪ್ರವಾಸೋದ್ಯಮದಲ್ಲಿ ವಸತಿ ಸಮುಚ್ಚಯಗಳು ಪ್ರಮುಖ ಅಂಗವಾಗಿದ್ದು, ಕೇಂದ್ರ ಸರಕಾರದಲ್ಲಿ ಇದಕ್ಕೆ ಸಂಬಂಧಿಸಿದ ಸ್ಪಷ್ಟ ದತ್ತಾಂಶಗಳಿಲ್ಲದಿರುವ ಕಾರಣದಿಂದಾಗಿ ಪ್ರಸ್ತುತ ಕೋವಿಡ್-19ನಿಂದಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಸತಿ ಸಮುಚ್ಚಯಗಳ ಮಾಹಿತಿಗಳನ್ನು ಒಂದೆಡೆ ಕ್ರೋಢೀಕರಿಸುವ ಉದ್ದೇಶಿಸಲಾಗಿದೆ. ಇದರಿಂದಾಗಿ ಆರೋಗ್ಯ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಸುಲಭವಾಗಿ ಕೈಗೊಳ್ಳಬಹುದಾಗಿದೆ. ಈ ಬೃಹತ್ ದತ್ತಾಂಶಗಳ ಕ್ರೋಢೀಕರಣವು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಈ ರೀತಿಯ ಸಾಂಕ್ರಾಮಿಕ ಹಾಗೂ ತುರ್ತು ಸಂದರ್ಭಗಳಲ್ಲಿ ಅಗತ್ಯ ಕ್ರಮಕೈಗೊಳ್ಳಲು ಉಪಯುಕ್ತವಾಗಲಿದೆ.

ಈ ಹಿನ್ನೆಲೆ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಜಂಟಿ ಕಾರ್ಯದರ್ಶಿ ರಾಖೇಶ್‍ಕುಮಾರ್ ಶರ್ಮಾ ಅವರು ರಾಜ್ಯ ಪ್ರವಾಸೋದ್ಯಮ ನಿರ್ದೇಶಕರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಎಲ್ಲ ರಾಜ್ಯದಲ್ಲಿನ ವಸತಿ ಸಮುಚ್ಚಯಗಳ (ಹೊಟೇಲ್, ವಸತಿ ಗೃಹಗಳ) ವಿಭಾಗವಾರು ವಿಂಗಡಿಸಿ ಮಾಹಿತಿಗಳನ್ನು hoಣeಟಛಿಟouಜ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಕ್ರೋಢೀಕರಿಸಲು ಕೇಂದ್ರದ ಪತ್ರದಲ್ಲಿ ಸೂಚಿಸಲಾಗಿದೆ. ಅದರಂತೆ ಪ್ರವಾಸೋದ್ಯಮ ರಾಜ್ಯ ನಿರ್ದೇಶಕರು ಎಲ್ಲ ಜಿಲ್ಲಾ ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರುಗಳಿಗೆ ಆಯಾ ಜಿಲ್ಲೆ, ತಾಲೂಕು ವ್ಯಾಪ್ತಿಯಲ್ಲಿ ಬರುವ ವಸತಿ ಸಮುಚ್ಚಯಗಳ ಮಾಹಿತಿಯನ್ನು ಆಯಾ ವಿಭಾಗದ ಹೊಟೇಲ್, ವಸತಿ ಗೃಹಗಳ ಮುಖ್ಯಸ್ಥರಿಂದ ನೇರವಾಗಿ ವೆಬ್‍ಸೈಟ್‍ನಲ್ಲಿ ಲಾಗಿನ್ ಮಾಡಿ ಕ್ರೋಢೀಕರಿಸುವಂತೆ ಸೂಚಿಸಿದ್ದಾರೆ. ಈ ಕಾರ್ಯವನ್ನು ಅತ್ಯಂತ ಜರೂರು ಎಂದು ಪರಿಗಣಿಸಿ ಆದಷ್ಟು ಶೀಘ್ರ ಮಾಹಿತಿ ಸಂಗ್ರಹಿಸಿ ಇಲಾಖೆಗೆ ಕಳುಹಿಸಿಕೊಡುವಂತೆ ಸೂಚನೆ ನೀಡಿದ್ದಾರೆ.

ಏನೇನು ಮಾಹಿತಿ...?

ಹೊಟೇಲ್, ವಸತಿ ಗೃಹಗಳ ಮುಖ್ಯಸ್ಥರು ವೆಬ್‍ಸೈಟ್‍ನಲ್ಲಿ ಲಾಗಿನ್ ಆಗಿ ವಸತಿ ಸಮುಚ್ಚಯ ಒಳಪಡುವ ರಾಜ್ಯ, ಜಿಲ್ಲೆಯ ಕೋಡ್, ನಗರ, ಪಟ್ಟಣ ಕೋಡ್, ವಸತಿ ಸಮುಚ್ಚಯದ ಹೆಸರು, ಪಿನ್‍ಕೋಡ್, ಸ್ಥಿರ ದೂರವಾಣಿ ಸಂಖ್ಯೆ, ಫ್ಯಾಕ್ಸ್ ಸಂಖ್ಯೆ, ವೆಬ್‍ಸೈಟ್, ಅಧಿಕೃತ ಮುಖ್ಯಸ್ಥರ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ವಸತಿ ಸಮುಚ್ಚಯದ ವಿಭಾಗವಾರು ಮಾಹಿತಿ, ಲಭ್ಯವಿರುವ ಕೊಠಡಿಗಳ ಸಂಖ್ಯೆ ಇವುಗಳನ್ನು ನಮೂದು ಮಾಡಬೇಕಿದೆ.