ಕೊಡ್ಲಿಪೇಟೆ, ಜು. 8: ಕೊಡಗು ಜಿಲ್ಲಾ ಕಾಂಗ್ರೆಸ್‍ನಲ್ಲಿ ಉದ್ಬವಿಸಿರುವ ಬಿನ್ನಮತಕ್ಕೆ ಸಂಬಂಧಿಸಿದಂತೆ ಕೊಡ್ಲಿಪೇಟೆ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಔರಂಗಜೇಬ್ ಮಾತನಾಡಿ ಪಕ್ಷದ ಇತ್ತೀಚಿನ ಗೊಂದಲಮಯ ಬೆಳವಣಿಗೆಗೆ ಜಿಲ್ಲಾದ್ಯಕ್ಷ ಮಂಜುನಾಥ್ ಕುಮಾರ್ ಅವರೆ ಕಾರಣ. ಜಿಲ್ಲಾ ನಾಯಕರಲ್ಲಿ ಮೂಡಿರುವ ಭಿನ್ನಮತವನ್ನು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕುಳಿತು ಹಿರಿಯ ನಾಯಕರುಗಳ ಸಮ್ಮುಖದಲ್ಲಿ ಶಮನಗೊಳಿಸಬೇಕಿತ್ತು. ಅದನ್ನು ಬಿಟ್ಟು ಪತ್ರಿಕಾ ಹೇಳಿಕೆಯ ಮೂಲಕ ಬಹಿರಂಗಪಡಿಸಿ ಶಿಸ್ತು ಕ್ರಮ ಕ್ಯೆಗೊಳ್ಳುತ್ತೇನೆಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ಪಕ್ಷದ ಹಿತದೃಷ್ಟಿಯಿಂದ ಪಕ್ಷದ ವರಿಷ್ಠರು ವಿ.ಪಿ.ಶಶಿಧರ್ ಹಾಗೂ ಕೆ.ಪಿ.ಚಂದ್ರಕಲಾ ಅವರ ಹೇಳಿಕೆಯ ಬಗ್ಗೆ ಇರುವ ಗೊಂದಲವನ್ನು ಮುಖಂಡರುಗಳ ಸಭೆ ಕರೆದು ಚರ್ಚಿಸಿ ನಿವಾರಿಸುವಂತಾಗಬೇಕೆಂದರು.

ಕೊಡ್ಲಿಪೇಟೆ ಹೋಬಳಿಯ ಕೊಡ್ಲಿಪೇಟೆ, ಬ್ಯಾಡಗೊಟ್ಟ, ಬೆಸೂರು ವಲಯಗಳು ಕುಶಾಲನಗರ ಬ್ಲಾಕಿಗೆ ಸೇರ್ಪಡೆಯಾಗಿದ್ದು, ಕಾರ್ಯಕ್ರಮಗಳಿಗೆ ಇನ್ನಿತರ ಸಭೆಗಳಿಗೆ ಕುಶಾಲನಗರಕ್ಕೆ ತೆರಳಲು ಅನಾನುಕೂಲವಾಗಿರುವುದರಿಂದ ಈ ವಲಯಗಳನ್ನು ಸೋಮವಾರಪೇಟೆ ಬ್ಲಾಕಿಗೆ ಸೇರಿಸಬೇಕೆಂದು ಅವರು ಮನವಿ ಮಾಡಿದರು.

ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಜೆ.ಕೆ. ತೇಜ್ ಕುಮಾರ್ ಮಾತನಾಡಿ ಪಕ್ಷದಲ್ಲಿ ಉದ್ಬವಿಸಿರುವ ಭಿನ್ನಮತಕ್ಕೆ ಕಾರಣಕರ್ತರಾದ ಜಿಲ್ಲಾಧ್ಯಕ್ಷರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಇವರನ್ನು ಬದಲಾಯಿಸಿ ಸಮರ್ಥ ವ್ಯಕ್ತಿಯನ್ನು ನೇಮಿಸಬೇಕು ಎಂದರು.

ಯುವ ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಪ್ರಸನ್ನ, ಡಿ.ಕೆ.ಶಿ. ಅಭಿಮಾನಿಗಳ ಸಂಘದ ಜಿಲ್ಲಾ ಸದಸ್ಯ ಸಾಬ್‍ಜಾನ್, ಬೆಂಬಳೂರು ಬೂತ್ ಅಧ್ಯಕ್ಷ ವಹಾಬ್, ಸಮಿತಿ ಅಧ್ಯಕ್ಷ , ಮೋಹನ್ ದಾಸ್ . ಅಧ್ಯಕ್ಷರು ದೊಡ್ಡಕೊಡ್ಲಿ ಬೂತ್ ಸಮಿತಿ ಅಧ್ಯಕ್ಷÀ ಟಿ.ಪಿ. ಅಶೋಕ್, ಕೊಡ್ಲಿಪೇಟೆ ಬೂತ್ ಅಧ್ಯಕ್ಷ ಮೋಹನ್ ದಾಸ್, ಕೊಡ್ಲಿಪೇಟೆ 1ನೇ ಬೂತ್ ಅಧ್ಯಕ್ಷ ವಹಾಬ್ ಉಪಸ್ಥಿತರಿದ್ದರು.