ಶನಿವಾರಸಂತೆ, ಜು. 8: ಶನಿವಾರಸಂತೆ ಹೋಬಳಿಯ ಸೀಗೆಮರೂರು ಗ್ರಾಮದ ಕುಮಾರಸ್ವಾಮಿ ಎಂಬವರಿಗೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಭಾಮಾಮಣಿ ಹಾಗೂ ಅಳಿಯ ಧನರಾಜ್ ಎಂಬವರು ಹಲ್ಲೆ ಮಾಡಿರುವ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ದೂರು ದಾಖಲಾಗಿದೆ. ತಂದೆ ಕುಮಾರಸ್ವಾಮಿ ಹಾಗೂ ಇತರರು ತನ್ನ ಮನೆಗೆ ಬಂದು ತನ್ನ ಮೇಲೆ ಹಲ್ಲೆ ಮಾಡಿರುವುದಾಗಿ ಭಾಮಾಮಣಿ ಪ್ರತಿ ದೂರು ನೀಡಿದ್ದಾರೆ.