ಮಡಿಕೇರಿ, ಜು. 8: ಕೊಡಗಿನ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ ಜನವರಿಯಿಂದ ಇಂದಿನ ತನಕ ಸರಾಸರಿ ಒಂದು ನೂರು ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ 69.32 ಇಂಚು ಮಳೆ ದಾಖಲಾಗಿತ್ತು. ಭಾಗಮಂಡಲ ವ್ಯಾಪ್ತಿಯಲ್ಲಿ ಪ್ರಸಕ್ತ 77.17 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಗೆ 42.78 ಇಂಚು ಮಳೆಯಾಗಿತ್ತು.

ತಲಕಾವೇರಿ ವ್ಯಾಪ್ತಿಯಲ್ಲಿ ಜೂನ್ ತನಕ 70 ಇಂಚು ಮಳೆಯೊಂದಿಗೆ ಜುಲೈನಲ್ಲಿ ಇಂದಿನ ತನಕ 35 ಇಂಚು ಮಳೆಯೊಂದಿಗೆ ಒಟ್ಟು 105 ಇಂಚು ದಾಖಲಾಗಿದೆ. ಅಂತೆಯೇ ಗಾಳಿಬೀಡು ವ್ಯಾಪ್ತಿಯಲ್ಲಿ ಈ ಅವಧಿಗೆ 50 ಇಂಚು ಮಳೆ ದಾಖಲಾಗಿದ್ದು, ಕಳೆದ ವರ್ಷ ಇದೇ ವೇಳೆಗೆ 26.02 ಇಂಚು ಮಳೆಯಾಗಿತ್ತು.

ಜಿಲ್ಲೆಗೆ ಮಳೆ : ಹಿಂದಿನ 24 ಗಂಟೆಗಳಲ್ಲಿ ಕೊಡಗು ಜಿಲ್ಲೆಗೆ ಸರಾಸರಿ 1.48 ಇಂಚು ಮಳೆಯಾಗಿದೆ. ಜನವರಿಯಿಂದ ಈ ತನಕ 21.69 ಇಂಚು ಸರಾಸರಿ ದಾಖಲಾಗಿದೆ. ಕಳೆದ ವರ್ಷ ಈ ವೇಳೆಗೆ 18.17 ಇಂಚು ದಾಖಲಾಗಿತ್ತು.

ಕಳೆದ 24 ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ 2.04 ಇಂಚು ಸರಾಸರಿ ಮಳೆಯಾದರೆ, ವೀರಾಜಪೇಟೆ ತಾಲೂಕಿನಲ್ಲಿ 1.25 ಇಂಚು ಹಾಗೂ ಸೋಮವಾರಪೇಟೆ ತಾಲೂಕಿಗೆ 1.51 ಇಂಚು ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಗೆ 0.62 ಇಂಚು, ನಾಪೋಕ್ಲು 1.69 ಇಂಚು, ಸಂಪಾಜೆ 1.92 ಇಂಚು, ಭಾಗಮಂಡಲ 3.93 ಇಂಚು ಸರಾಸರಿ ದಾಖಲಾಗಿದೆ.

ವೀರಾಜಪೇಟೆಗೆ 1.18 ಇಂಚು, ಹುದಿಕೇರಿ 2.31 ಇಂಚು, ಶ್ರೀಮಂಗಲ 1.61 ಇಂಚು, ಪೊನ್ನಂಪೇಟೆ 1.92 ಇಂಚು, ಅಮ್ಮತ್ತಿ 0.55 ಹಾಗೂ ಬಾಳೆಲೆ 0.78 ಇಂಚು ಮಳೆಯಾಗಿದೆ. ಸೋಮವಾರಪೇಟೆಗೆ 0.82 ಇಂಚು, ಶನಿವಾರಸಂತೆಗೆ 1 ಇಂಚು, ಶಾಂತಳ್ಳಿ 3.43 ಇಂಚು, ಕೊಡ್ಲಿಪೇಟೆಗೆ 1.77 ಇಂಚು, ಕುಶಾಲನಗರ 0.14 ಹಾಗೂ ಸುಂಟಿಕೊಪ್ಪ 0.20 ಹಾಗೂ ಹಾರಂಗಿಯಲ್ಲಿ 0.12 ಇಂಚು ದಾಖಲಾಗಿದೆ.