ಹಾರಂಗಿ, ಜು. 8: ಕಳೆದ ವರ್ಷ ಬಿದ್ದ ಮಳೆಗೆ ಜಿಲ್ಲೆಯಾದ್ಯಂತ ಭೂ-ಕುಸಿತ, ಪ್ರವಾಹ ಸಂಭವಿಸಿತು. ಕುಶಾಲನಗರ ಸುತ್ತಮುತ್ತ ಅನೇಕ ಮನೆಗಳು ಸೇರಿದಂತೆ ಅಂಗಡಿ ಮಳಿಗೆಗಳು ಜಲಾವೃತಗೊಂಡವು. ಇದಕ್ಕೆ ಮಳೆಯ ರಭಸ ಒಂದು ಕಾರಣವಾದರೆ, ಒಂದೇ ಸಮನೆ ಹಾರಂಗಿ ಜಲಾಶಯದಿಂದ ಬಿಡುಗಡೆಗೊಳಿಸಿದ ನೀರು, ಅದರ ರಭಸವೂ ಕಾರಣ. 2019 ರಲಿ ್ಲ ಅಣೆಕಟ್ಟೆಯು ಆಗಸ್ಟ್ 9 ರಂದು ಭರ್ತಿಯಾಗಿದ್ದು, ಜಲಾಶಯದ ಮೂಲಕ ನೀರನ್ನು ಬಿಡುಗಡೆಗೊಳಿಸಲಾಯಿತು. 2018 ರಲ್ಲಿ ಆಗಸ್ಟ್ 17 ರಂದು ಏಕಾಏಕಿ ನೀರನ್ನು ಬಿಡುಗಡೆ ಗೊಳಿಸಲಾಯಿತು. ಇದರ ಪರಿಣಾಮ ಕುಶಾಲನಗರ ಪ್ರದೇಶದಲ್ಲಿನ ಅನೇಕ ಮನೆಗಳು ಮುಳುಗಲ್ಪಟ್ಟವು. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಇಷ್ಟು ತುಂಬಿದ ನಂತರ ನೀರನ್ನು ಬಿಡುಗಡೆಗೊಳಿಸಿದರೆ, ಪ್ರವಾಹ ಉಂಟಾಗಬಹುದೆಂದು, 2019 ರಲ್ಲಿ ಅಣೆಕಟ್ಟೆಯಲ್ಲಿ 2853.24 ಅಡಿಯಷ್ಟು ನೀರು ತುಂಬಿದಕ್ಷಣ ನೀರು ಬಿಡಲಾಯಿತು. ಆದರೂ ಕುಶಾಲನಗರದ ಕೆಲವೆಡೆ ಪ್ರವಾಹ ಉಂಟಾಗಿದ್ದು, ಈ ವರ್ಷ ಯಾವುದೇ ಪ್ರವಾಹ ಸಂಭವಿಸದಂತೆ ಅಣೆಕಟ್ಟೆಯ ಗರಿಷ್ಠ ಮಟ್ಟ 2859 ಅಡಿಯಷ್ಟು ನೀರಿನ ಮಟ್ಟ ತಲುಪಲು, 5 ಅಡಿ ಇರುವಾಗಲೆ ಹಂತ ಹಂತವಾಗಿ ನೀರನ್ನು ಬಿಡಲು ಸೂಚನೆಗಳಿವೆ. 5 ಅಡಿ ಇರುವಾಗಲೂ ಒಮ್ಮೆಲೆ ನೀರನ್ನು ಬಿಡುಗಡೆಗೊಳಿಸುವುದು ಸಮಂಜ ಸವಲ್ಲದ ಕಾರಣ, ಜಲಾಶಯದಲ್ಲಿನ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ಹಂತಹಂತವಾಗಿ ಹರಿಸುವ ಮೂಲಕ ಸಂಭಾವ್ಯ ಪ್ರವಾಹ ಪರಿಸ್ಥಿತಿ ನಿಭಾಯಿಸುವಂತೆ ಆಗಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೇಂದ್ರದಿಂದಲೆ ನಿರ್ವಹಣೆ

2 ವರ್ಷಗಳು ಸತತವಾಗಿ ಹಾರಂಗಿ ಅಣೆಕಟ್ಟೆಯಲ್ಲಿನಿಂದ ನೀರನ್ನು ನಿಯಂತ್ರಣವಿಲ್ಲದೆ ಏಕಾಏಕಿ ಬಿಡುಗಡೆಗೊಳಿಸಿದ್ದು, ಪ್ರವಾಹ ಸಂಭವಿಸಿತ್ತು. ಈ ಸಂಬಂಧ ಗ್ರಾಮಸ್ಥರು ಸೇರಿದಂತೆ ಹಲವು ಸಂಘ ಸಂಸ್ಥೆಗಳು ನೀರನ್ನು ನಿಯಂತ್ರಿತವಾಗಿ ಹರಿಸಲು ಒತ್ತಾಯಿಸಿದ್ದರು. ಮಳೆ ತೀವ್ರಗೊಳ್ಳುವ ಮುನ್ನವೇ ನೀರು ಬಿಡುವಂತೆ ಕೆಲ ಸ್ಥಳೀಯರು ಆಗ್ರಹಿಸಿದ್ದರು. ಆದರೆ ಅಣೆಕಟ್ಟೆಯ ನಿರ್ವಹಣೆ ಸೇರಿದಂತೆ ನೀರು ಹರಿವಿನ ನಿಯಂತ್ರಣ ಕೇಂದ್ರ ಸರಕಾರದ ಹಿಡಿತದಲ್ಲಿದ್ದು, ಸರಕಾರದ ಆದೇಶದಂತೆ ಇಲ್ಲಿನ ಕಾರ್ಯಾಚರಣೆಗಳು ನಡೆಯಬೇಕಿದೆ.

(ಮೊದಲ ಪುಟದಿಂದ) ಹಾರಂಗಿ ಜಲಾಶಯದ ನೀರಿನ ಪ್ರಮಾಣದ ಸಮಗ್ರವಾದ ಮಾಹಿತಿ, ಕಳೆದ ಎರಡು ವರ್ಷಗಳ ಹಿಂದೆ ಮಕ್ಕಂದೂರಿನ ತಂತಿ ಪಾಲದ ಬಳಿ ಪ್ರಾರಂಭಿಸಿರುವ ಕೇಂದ್ರ ಸರ್ಕಾರದ ನೀರು ಅಳತೆ ಮಾಪನ ಕೇಂದ್ರದಲ್ಲಿ ಲಭಿಸುತ್ತದೆ.

ಕೇಂದ್ರದ ಮೂಲಕ ಹಾರಂಗಿ ಅಣೆಕಟ್ಟೆಯ ಮಾಪಕ ವರದಿಗಳ ಆಧಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದರ ಮೂಲಕ ಅಣೆಕಟ್ಟೆಯ ನೀರಿನ ಮಟ್ಟವನ್ನು ಗಮನದಲ್ಲಿ ಇಡಲಾಗುತ್ತದೆ. ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ ಅಣೆಕಟ್ಟೆಯ ಗೇಟ್‍ಗಳ ಮೂಲಕ ನೀರನ್ನು ನದಿಗೆ ಹರಿಸಲಾಗುವುದು. ಅಲ್ಲದೆ ನದಿಗೆ ನೀರು ಬಿಡುವ ಸಂದರ್ಭ ಸಾರ್ವಜನಿಕರಿಗೆ ತಿಳುವಳಿಕೆ, ನದಿದಂಡೆಯ ಪ್ರದೇಶದ ಜನರಿಗೆ ಪೆÇಲೀಸ್ ಇಲಾಖೆ ಮೂಲಕ ಎಚ್ಚರಿಸಲಾಗುವುದು. ನೀರಿನ ಸಂಗ್ರಹ ಅಣೆಕಟ್ಟೆಗೆ ಹೆಚ್ಚುವರಿಯಾಗುತ್ತಿದಂತೆ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಕಾವೇರಿ ನೀರಾವರಿ ನಿಗಮದ ಎಲ್ಲಾ ಸಿಬ್ಬಂದಿಗಳು ಸನ್ನದ್ಧರಾಗಿರುವುದಾಗಿ ನಿಗಮದ ಅಧೀಕ್ಷಕ ಅಭಿಯಂತರ ಚೆನ್ನಕೇಶವ ತಿಳಿಸಿದ್ದಾರೆ. ಈ ಬಾರಿ, ಕಳೆದ ಸಾಲಿಗಿಂತ ಹೆಚ್ಚು ನೀರು ಒಳ ಹರಿಯುತ್ತಿರುವುದರಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಪೂರ್ವಭಾವಿ ಸಭೆ

ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ, ಅಣೆಕಟ್ಟೆಯಿಂದ ನದಿಗೆ ನೀರನ್ನು ಹರಿಸುವ ವಿಷಯಗಳ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಹಾರಂಗಿ ಜಲಾಶಯ ವಿಭಾಗದ ಎಲ್ಲಾ ಇಂಜಿನಿಯರ್‍ಗಳು ಭಾಗವಹಿಸಿದ್ದರು. ಸಭೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಶಾಸಕರು ಪಡೆದರು. ಈಗಾಗಲೇ ಅಣೆಕಟ್ಟೆಯು ಕಳೆದ ಸಾಲಿಗಿಂತ ಬೇಗನೆ ಭರ್ತಿ ಯಾಗುವ ನಿರೀಕ್ಷೆ ಇರುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ನಿಗಮದ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆಯನ್ನು ರಂಜನ್ ನೀಡಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ