ಗೋಣಿಕೊಪ್ಪಲು, ಜು. 7: ಕೊರೊನಾ ವೈರಸ್ ಆತಂಕವನ್ನು ಎದುರಿಸುತ್ತಿರುವ ಗೋಣಿಕೊಪ್ಪಲು ವಿನಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಪಂಚಾಯಿತಿ ನಿರ್ಧರಿಸಿದೆ. ಜನರ ಆರೋಗ್ಯ ದೃಷ್ಠಿಯಿಂದ ಪಟ್ಟಣವನ್ನು ಬುಧವಾರ ಹಾಗೂ ಗುರುವಾರ ದಂದು ಬಂದ್ ನಡೆಸಲು ತೀರ್ಮಾನಿ ಸಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಪಂಚಾಯಿತಿ ಕೋರಿದೆ.

ಅಲ್ಲದೇ ಸಮಸ್ಯೆ ಬಗೆಹರಿ ಯುವವರೆಗೂ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರ ತನಕ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸುವಂತೆ ನಿರ್ಧರಿಸಲಾಗಿದೆ ಎಂದು ಗ್ರಾ.ಪಂ. ಪ್ರಭಾರ ಅಧ್ಯಕ್ಷ ಕುಲ್ಲಚಂಡ ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತದ ತೀರ್ಮಾನದಂತೆ ಕ್ರಮಕೈಗೊಳ್ಳಲು ಮುಂದಾಗಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಮುರುಗ, ಜೆ.ಕೆ. ಸೋಮಣ್ಣ, ರಾಮಕೃಷ್ಣ, ಮಂಜುಳ ಸೇರಿದಂತೆ ಹಲವು ಸದಸ್ಯರು ಹಾಜರಿದ್ದರು.ತಿತಿಮತಿ: ಜನರ ಆರೋಗ್ಯದ ಬಗ್ಗೆ ಗಮನ ಹರಿಸಿದ ತಿತಿಮತಿ ಗ್ರಾಮ ಪಂಚಾಯಿತಿ ಬುಧವಾರ ಹಾಗೂ ಗುರುವಾರದಂದು ವಹಿವಾಟುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ತಿತಿಮತಿ ಗ್ರಾ.ಪಂ. ಸಭಾಂಗಣ ದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಮತಾ ಜಗದೀಶ್ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೇ ತಾ. 31ರವರೆಗೆ ಕೊರೊನಾ ಮಹಾಮಾರಿಯ ಆತಂಕವನ್ನು ನಿವಾರಿಸಲು ಮತ್ತು ಜನತೆಯ ಆರೋಗ್ಯದ ಕಾಳಜಿಯಿಂದ ತಾ. 10 ರಿಂದ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ತನಕ

(ಮೊದಲ ಪುಟದಿಂದ) ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸುವಂತೆ ನಿರ್ಧರಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ಅಗತ್ಯವಿದೆ ಎಂದು ಪಿ.ಡಿ.ಓ ಕೋರಿದ್ದಾರೆ.

ಸಭೆಯಲ್ಲಿ ಜಿ.ಪಂ. ಸದಸ್ಯೆ ಪಂಕಜ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಶ್ರೀನಿವಾಸ, ಗ್ರಾ.ಪಂ. ಮಾಜಿ ಸದಸ್ಯ ಅನೂಪ್‍ಕುಮಾರ್, ಖಾಲಿದ್ ಸೇರಿದಂತೆ ಆಟೋ ಚಾಲಕರ ಸಂಘ, ವಾಹನ ಚಾಲಕರ ಸಂಘ ಹಾಗೂ ಚೇಂಬರ್ ಆಫ್ ಕಾಮರ್ಸ್ ಪ್ರಮುಖರ ಉಪಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಂಡಿದೆ.

ಪೆÇನ್ನಂಪೇಟೆ: ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿಯೂ ಕೂಡ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಪೆÇನ್ನಂಪೇಟೆ ಪಟ್ಟಣವನ್ನು ತಾ. 8 ಹಾಗೂ 9 ರಂದು ಎರಡು ದಿನ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಹಾಗೂ 10 ರಿಂದ ಪ್ರತಿ ದಿನ ಬೆಳಿಗ್ಗೆ 6 ಗಂಟೆಯಿಂದ 12 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಇಂದು ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತ್ರ ಅವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ಬೆಳಿಗ್ಗೆ 9 ಗಂಟೆ ವರೆಗೆ ಮಾತ್ರ ಹಾಲು ಹಾಗೂ ಪೇಪರ್ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೆಡಿಕಲ್ ಶಾಪ್ ಹೊರತು ಪಡಿಸಿ, ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಬಂದ್ ಆಗಲಿದೆ. ಆಟೋ, ವಾಹನ ಸಂಚಾರ ಇರುವುದಿಲ್ಲ.

ಕೊರೊನಾ ಸೋಂಕಿನ ಬಗ್ಗೆ ಮುಂಜಾಗ್ರತೆ ವಹಿಸಲು ಪೆÇನ್ನಂಪೇಟೆಯ 6 ವಾರ್ಡ್ ಗಳಲ್ಲಿಯೂ ಸ್ವ ಸಹಾಯ ಸಂಘ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಒಳಗೊಂಡ 6 ಕಾರ್ಯಪಡೆ ತಂಡವನ್ನು ರಚಿಸಲಾಗಿದೆ. ಪೆÇನ್ನಂಪೇಟೆ ಪಟ್ಟಣದಲ್ಲಿ ವೈರಸ್ ನಿವಾರಕ ದ್ರಾವಣ ಸಿಂಪಡಿಸಲಾಗುವುದು.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಕೊಡಗಿಗೆ ಬರುವವರು ತಾವಾಗಿಯೇ ಬಂದು ಪಂಚಾಯಿತಿಗೆ ತಮ್ಮ ಮಾಹಿತಿ ನೀಡುವ ಮೂಲಕ ಸೋಂಕು ತಡೆಗಟ್ಟುವಲ್ಲಿ ಸಹಕಾರ ನೀಡಬೇಕು. ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಸಹಾಯವಾಣಿ ತೆರೆಯಲಾಗಿದ್ದು ದೂರು ಇದ್ದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 08274-249016 ಅಥವಾ 9480869417ಗೆ ಕರೆ ಮಾಡುವಂತೆ ಪಿ ಡಿ ಓ ಪುಟ್ಟರಾಜು ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಪೆÇನ್ನಂಪೇಟೆ ಛೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಕೋಳೆರ ದಯಾಚಂಗಪ್ಪ, ಕಾರ್ಯದರ್ಶಿ ಅಜೀಜ್, ಪೆÇನ್ನಂಪೇಟೆ ಪೆÇಲೀಸ್ ಠಾಣೆ ಉಪಠಾಣಾಧಿಕಾರಿ ವೆಂಕಟೇಶ್, ಗ್ರಾ.ಪಂ. ಸದಸ್ಯರಾದ ರಶೀದ್ ಎ.ಎಂ, ಲಕ್ಷ್ಮಣ್ ಎಂ.ಪಿ., ಯಶೋಧ ಎಂ.ಸಿ., ಸುಮತಿ ಕೆ.ಎನ್., ದಶಮಿ, ರೂಪ ಸಿ. ಉತ್ತಪ್ಪ, ರಸಿಕ ಕೆ.ಎ., ಸುಬೇಧ, ಕಾವೇರಮ್ಮ ಎಂ.ಎಂ., ಇನ್ನಿತರರು ಇದ್ದರು.