ಮಡಿಕೇರಿ, ಜು. 7: ಕೊಡಗು ಜಿಲ್ಲೆಯಲ್ಲಿ ಒಂದೇ ದಿನ 14 ಕೊರೊನಾ ಸೋಂಕು ಪ್ರಕರಣ ಬೆಳಕಿಗೆ ಬಂದಿದ್ದು, ಈ ನಡುವೆ ಮಡಿಕೇರಿ ತಾಲೂಕು ಹೊದ್ದೂರು ಗ್ರಾಮದ ಹಿಂದೂ ಕುಟುಂಬದ 54 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. ಮೃತರಿಗೆ ಕೊರೊನಾ ಸೋಂಕಿನ ಶಂಕೆಯಿಂದ ವೈದ್ಯಕೀಯ ಪರೀಕ್ಷೆ ಗೊಳಪಡಿಸಿ, ಅಂತ್ಯಸಂಸ್ಕಾರವನ್ನು ನಿಯಮಾನುಸಾರ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ದೃಢಪಡಿಸಿದ್ದಾರೆ. ಅಲ್ಲದೆ ಪ್ರಯೋಗಾಲಯದಿಂದ ವರದಿ ಬಳಿಕವಷ್ಟೇ ಕೊರೊನಾ ಸೋಂಕಿನ ಕುರಿತು ಮಾಹಿತಿ ಲಭಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ನಗರದ ಮೈಸೂರು ರಸ್ತೆ ಯಲ್ಲಿರುವ ಹಿಂದೂ ರುದ್ರಭೂಮಿ ಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ನಗರಸಭೆ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ತಹಶೀಲ್ದಾರ್ ಸಮಕ್ಷಮ ಭಜರಂಗದಳ ಕಾರ್ಯ ಕರ್ತರ ಪಾಲ್ಗೊಳ್ಳುವಿಕೆ ಯೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸೌಧೆ ಒದಗಿಸಿದ್ದಾರೆ. ಮೃತ ವ್ಯಕ್ತಿ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಅಂತ್ಯಕ್ರಿಯೆಯಲ್ಲಿ ನಿರ್ಲಕ್ಷ ಅಧಿಕಾರಿಗಳು ಸಭೆಗೆ ಸೀಮಿತ ವಾದರೇ ಎಂದು ಕಾರ್ಯಕರ್ತರ ವಿಷಾದದ ಪ್ರಶ್ನೆ ಇಂದು ಚೈನ್ ಗೇಟ್ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ನೆರವು ನೀಡಲು ಸ್ವಯಂ ಸೇವಕರ ತಂಡ ಮುಂದಾಗಿತ್ತು. ಆದರೆ ಅಂತ್ಯಕ್ರಿಯೆಗೆ ಯಾವುದೇ ಸಿದ್ಧತೆ ಮಾಡಿಕೊಳ್ಳದ ಆಡಳಿತ ವ್ಯವಸ್ಥೆಯಿಂದ ಪರದಾಡು ವಂತಾಯಿತು.
ಬೆಳಿಗ್ಗೆ 11 ಗಂಟೆಗೆ ಸ್ಮಶಾನಕ್ಕೆ ತೆರಳಿದ್ದ ಸ್ವಯಂಸೇವಕರು ಮಧ್ಯಾಹ್ನ 3 ಗಂಟೆಯವರೆಗೆ ಪಾರ್ಥಿವ ಶರೀರಕ್ಕಾಗಿ ಆಸ್ಪತ್ರೆಯಲ್ಲಿ ಕಾದು ನಿಂತರು, ನಂತರ ಸೌದೆ, ಡಿಸೇಲ್ ಕೂಡ ಇಲ್ಲದೆ ಮಳೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲು ಹೆಣಗಾಡು ವಂತಾಯಿತು.
ಸಭೆಯಲ್ಲಿ ಹೇಳಿದ್ದು ಒಂದು ವ್ಯವಸ್ಥೆ ಮಾಡದೇ ಮಾಡಿದ್ದು ಮತ್ತೊಂದು ಎಂದು ಅಧಿಕಾರಿಗಳ ಮೇಲೆ ಅಸಮಾಧಾನಗೊಂಡರು.
ಸ್ಥಳಕ್ಕಾಮಿಸಿದ ಉಪವಿಭಾಗಾಧಿ ಕಾರಿಗಳು ರುದ್ರಭೂಮಿಯಲ್ಲಿ ಸೂಕ್ತ ಜಾಗ ಗುರುತಿಸುವಂತೆ ಸ್ವಯಂ ಸೇವಕರ ಒತ್ತಾಯಿಸಿದರು. ನಾಳೆಯಿಂದಲೇ ಎಲ್ಲ ವ್ಯವಸ್ಥೆ ಮಾಡಿಸುವುದಾಗಿ ಅಧಿಕಾರಿ ಭರವಸೆ ನೀಡಿದರು.
14 ಸೋಂಕು ಪ್ರಕರಣ
ವೀರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಹರಿಶ್ಚಂದ್ರಪುರದ ಜ್ವರ ಲಕ್ಷಣಗಳಿದ್ದ 23 ವರ್ಷದ ಮಹಿಳೆ. ಈ ತಾಲೂಕಿನ ಗೋಣಿಕೊಪ್ಪದ ನೇತಾಜಿ
(ಮೊದಲ ಪುಟದಿಂದ) ಲೇಔಟ್‍ನ 50 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತ .ವೀರಾಜಪೇಟೆ ತಾಲೂಕಿನ ತಿತಿಮತಿಯ ಆರೋಗ್ಯ ಕಾರ್ಯ ಕರ್ತರ ವಾಹನ ಚಾಲಕರಾಗಿರುವ 54 ವರ್ಷದ ಪುರುಷ ಇವರು ತಿತಿಮತಿಯ ವಸತಿ ಗೃಹದಲ್ಲಿ ವಾಸವಾಗಿದ್ದಾರೆ. ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ಜ್ವರ ಲಕ್ಷಣಗಳಿದ್ದ 50 ವರ್ಷದ ಪುರುಷ.
ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಪೆರುಂಬಾಡಿಗೆ ಬೆಂಗಳೂರಿನಿಂದ ಪ್ರಯಾಣಿಸಿರುವ ಇತಿಹಾಸವಿರುವ ಒಂದೇ ಕುಟುಂಬದ ಮೂವರಿಗೆ ಕೊರೊನಾ ಪತ್ತೆಯಾಗಿದೆ. 56 ವರ್ಷದ ಪುರುಷ, 36 ವರ್ಷದ ಮಹಿಳೆ ಮತ್ತು 12 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಈ ಹಿಂದೆ ಸೋಂಕು ದೃಢಪಟ್ಟಿದ್ದ ಮಡಿಕೇರಿಯ ಆಸ್ಪತ್ರೆ ವಸತಿ ಗೃಹದ ಆರೋಗ್ಯ ಕಾರ್ಯಕರ್ತರ ಪ್ರಾಥಮಿಕ ಸಂಪರ್ಕವಾದ 39 ವರ್ಷದ ಮಹಿಳೆ, 38 ವರ್ಷದ ಪುರುಷ ಮತ್ತು 18 ವರ್ಷದ ಯುವಕ.
ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಿರಿಯಾಪಟ್ಟಣದ 17 ವರ್ಷದ ಯುವಕ. ಸೋಮವಾರಪೇಟೆ ತಾಲ್ಲೂಕಿನ ಬಳಗುಂದ ಗ್ರಾಮದಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 11 ವರ್ಷದ ಬಾಲಕ. ವೀರಾಜಪೇಟೆ ತಾಲ್ಲೂಕು ಶ್ರೀಮಂಗಲ ಗ್ರಾಮದ ಜ್ವರ ಲಕ್ಷಣಗಳಿದ್ದ 34 ವರ್ಷದ ಮಹಿಳೆ. ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ಜ್ವರ ಲಕ್ಷಣಗಳಿದ್ದ 29 ವರ್ಷದ ಪುರುಷ. ಹೀಗಾಗಿ ಜಿಲ್ಲೆಯಲ್ಲಿ ಹೊಸದಾಗಿ 7 ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.
ಹೆಚ್.ಸಿ ಪುರ, ಗೋಣಿಕೊಪ್ಪ ಹರಿಶ್ಚಂದ್ರಪುರ ಹಾಗೂ ನೇತಾಜಿ ಬಡಾವಣೆ, ಆರೋಗ್ಯ ವಸತಿ ಗೃಹ ತಿತಿಮತಿ , ಶ್ರೀಮಂಗಲ ಗ್ರಾಮ ಪೆರುಂಬಾಡಿ, ಆರ್ಜಿ ಗ್ರಾಮಗಳು ಕರಿಕೆ ಗ್ರಾಮದಲ್ಲಿ 2 ಕಡೆ ನಿಬರ್ಂಧಿತ ಪ್ರದೇಶವೆಂದು ಘೋಷಿಸಲಾಗಿದೆ.
ಮುಕ್ತ ಅವಕಾಶ: ಈ ಹಿಂದೆ ತೆರೆಯಲಾಗಿದ್ದ ಈ ಕೆಳಕಂಡ 3 ನಿಯಂತ್ರಿತ ಪ್ರದೇಶಗಳನ್ನು 14 ದಿನ ಕಳೆದಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಶಿರಂಗಾಲ, ಆಲೂರು ಸಿದ್ದಾಪುರದ ದೊಡ್ಡಳ್ಳಿ ಮತ್ತು ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನ ರಸ್ತೆ ಮುಕ್ತವಾಗಿದೆ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 92 ಕ್ಕೇರಿದ್ದು, 10 ಪ್ರಕರಣ ಗುಣಮುಖವಾಗಿವೆ. ಮೃತಪಟ್ಟ ಪ್ರಕರಣ-1 ಮತ್ತು 81 ಪ್ರಕರಣಗಳು ಸಕ್ರಿಯವಾಗಿರುತ್ತದೆ. ಆಸ್ಪತ್ರೆಯಲ್ಲಿದ್ದು, ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ ಒಟ್ಟು-36 ಆಗಿರುತ್ತದೆ ಎಂದು ವಿವರಣೆ ನೀಡಿದ್ದಾರೆ.