ಪೆÇನ್ನಂಪೇಟೆ, ಜು.8 : ಕೊಡಗಿನಲ್ಲಿ ದಿನೇದಿನೇ ಕೋವಿಡ್-19 ಸೋಂಕು ಹೆಚ್ಚುತ್ತಿದೆ. ಆದ್ದರಿಂದ ಜಿಲ್ಲೆಯ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಗಡಿಗೇಟ್‍ಗಳನ್ನು ಜಿಲ್ಲಾಡಳಿತ ಕೂಡಲೇ ಬಂದ್ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್.ಪ್ರಥ್ಯು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೊಡಗು-ಕೇರಳ ಗಡಿಭಾಗದ ಕರಿಕೆ, ಮಾಕುಟ್ಟ, ಮತ್ತು ಕುಟ್ಟ ಅಂತರರಾಜ್ಯ ಗಡಿಗೇಟ್ ಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಅದರಂತೆ ಈಗ ಮಡಿಕೇರಿ ತಾಲೂಕಿನ ಸಂಪಾಜೆ, ವೀರಾಜಪೇಟೆ ತಾಲೂಕಿನ ಆನೆಚೌಕೂರು, ಕಾರ್ಮಾಡು ಮತ್ತು ಮಾಲ್ದಾರೆ, ಸೋಮವಾರಪೇಟೆ ತಾಲೂಕಿನ ಅಂತರ್ ಜಿಲ್ಲಾ ಗಡಿಗೇಟ್ ಗಳಾದ ಕೊಪ್ಪ, ಶಿರಂಗಾಲ, ಬಿಸ್ಲೆಘಾಟ್ ಮತ್ತು ಶನಿವಾರಸಂತೆ ಸಮೀಪದ ಮಾಗಲು ಗೇಟುಗಳನ್ನು ಕೂಡಲೇ ಬಂದ್ ಮಾಡಿದರೆ ಮಾತ್ರ ಕೊಡಗನ್ನು ಕೊರೊನಾ ಸೋಂಕಿನಿಂದ ರಕ್ಷಿಸಲು ಸಾಧ್ಯ. ಜನರ ಆರೋಗ್ಯ ದೃಷ್ಟಿಯಿಂದ ಕನಿಷ್ಟ ಒಂದು ತಿಂಗಳಿಗಾದರೂ ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.