ಕೂಡಿಗೆ, ಜು. 8: ಸೋಮವಾರಪೇಟೆ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಹಾರಂಗಿಯಿಂದ ಗುಡ್ಡೆಹೂಸೂರುವರೆಗಿನ ರಸ್ತೆ ಬದಿಯ ಎರಡು ಕಡೆಗಳಲ್ಲಿ ಗಿಡಗಳನ್ನು ನೆಡುವ ಕಾರ್ಯ ಪ್ರಾರಂಭವಾಗಿದೆ

ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಹುದುಗೂರುವಿನಲ್ಲಿ ಬೆಳೆಸಲಾದ ವಿವಿಧ ಜಾತಿಯ ಕಾಡು ಗಿಡಗಳನ್ನು ರಸ್ತೆಯ ಬದಿಯ ಎರಡು ಕಡೆಗಳಲ್ಲಿ ನೆಡಲಾಗುತ್ತಿದೆ. ಈ ಸಂದರ್ಭ ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ವಲಯಾ ಅಧಿಕಾರಿ ನಮನ್ ನಾಯಕ್ ಮತ್ತು ಉಪ ವಲಯಾ ಅರಣ್ಯ ಅಧಿಕಾರಿ ಎಸ್.ಕೆ. ಫಿರೋಜ್ ಖಾನ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.