ಮಡಿಕೇರಿ, ಜು. 7: ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಲುಗುಂಡಿ, ಸಂಪಾಜೆ ವ್ಯಾಪ್ತಿಯಲ್ಲಿ ಅಪರಾಹ್ನ 3 ಗಂಟೆಗೆ ವ್ಯವಹಾರ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಸಂಪಾಜೆ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಕುಮಾರ್ ಚೆದ್ಕಾರ್, ಚೆಂಬು ಗ್ರಾ.ಪಂ. ಅಧ್ಯಕ್ಷ ದಿನೇಶ್ ಸಂಪಾಜೆ, ಸುಂದರಿ, ಸೊಸೈಟಿಯ ಅಧ್ಯಕ್ಷರಾದ ಸೋಮಶೇಖರ್, ಎನ್.ಸಿ. ಅನಂತ್, ಪಂಚಾಯತ್ ಆಡಳಿತಾಧಿಕಾರಿ ಮಹದೇವ್, ಪಿಡಿಓ ನಾಗರಾಜ್ ಚಕ್ರಪಾಣಿ, ಕೆ.ಪಿ. ಜೋನಿ ಉಪಸ್ಥಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತು.