ಮಡಿಕೇರಿ, ಜು. 8: ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಭೂಕುಸಿತಕ್ಕೊಳಗಾದ ಮಡಿಕೇರಿ ತಾಲೂಕಿನ ಕಾಟಕೇರಿ, 2ನೇ ಮೊಣ್ಣಂಗೇರಿ ಹಾಗೂ ಜೋಡುಪಾಲ ಗ್ರಾಮಗಳಿಗೆ ನೂತನ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭೇಟಿ ನೀಡಿದರು. ಈ ಸಾಲಿನ ಮುಂಗಾರಿನಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಈ ಸಂದರ್ಭ ಪರಿಶೀಲಿಸಲಾಯಿತು.