ಸುಂಟಿಕೊಪ್ಪ, ಜು.8: ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭವನ್ನು ಕೆದಕಲ್ ವಲಯ ಸಮಿತಿ ಅಧ್ಯಕ್ಷ ವೆಂಕಪ್ಪ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕೆದಕಲ್ ವಲಯ ಸಮಿತಿ ವತಿಯಿಂದ ಕೆದಕಲ್ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಕೆದಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೆ.ಬಾಲಕೃಷ್ಣ ರೈ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಡಿಜಿಟಲ್ ಝೂಮ್ ಆ್ಯಪ್ ಅಧಿಕಾರ ಪದಗ್ರಹಣ ವೀಕ್ಷಣೆಯನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ಪ್ರಮಾಣವಚನ ಬೋಧಿಸಲಾಯಿತು. ಪಂಚಾಯಿತಿ ಸದಸ್ಯರಾದ ಕೆ. ದೇವಿ ಪ್ರಸಾದ್, ರಮೇಶ್, ಹರಿಣಿ, ಪವಿತ್ರ, ಪಕ್ಷದ ಕಾರ್ಯಕರ್ತರಾದ ಜೇಮ್ಸ್, ಅಶ್ವಿನ್, ರವಿ, ಹರೀಶ್ ಮತ್ತಿತ್ತರರು ಪಾಲ್ಗೊಂಡಿದ್ದರು.