ಸುಂಟಿಕೊಪ್ಪ, ಜು. 8: ಸುಂಟಿಕೊಪ್ಪ ಗದ್ದೆಹಳ್ಳ ಬಿಸಿಎಂ ಹಾಸ್ಟೆಲ್ ಹಾಗೂ ಬೈಚನ ಕುಟುಂಬಸ್ಥರ ಮನೆಗೆ ತೆರೆಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಸಾಧ್ಯವೇ ಇಲ್ಲದಂತಾಗಿದೆ. ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಗದ್ದೆಹಳ್ಳ ಗ್ರಾಮಸ್ಥರು ತೀರಾ ಹದಗೆಟ್ಟ ರಸ್ತೆಯನ್ನು ದುರಸ್ಥಿ ಪಡಿಸುವಂತೆ ಮನವಿ ಸಲ್ಲಿಸಿದ ಮೇರೆಗೆ ಶಾಸಕರ ನಿಧಿಯಿಂದ ಹಣ ಬಿಡುಗಡೆಗೊಳಿಸಿ ಫೆಬ್ರವರಿಯಲ್ಲಿ ಭೂಮಿ ಪೂಜೆಯನ್ನು ನೇರವೇರಿಸಿದರು.
ಆದರೆ ಇಂದಿಗೂ ರಸ್ತೆ ಭಾಗ್ಯ ಮಾತ್ರ ಲಭಿಸಲಿಲ್ಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಕಾಮಗಾರಿ ಇನ್ನೂ ನಡೆದಿಲ್ಲ ಈ ಮಳೆಯಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ಕೆಸರು ಗದ್ದೆಯಾಗಿದೆ ವಾಹನ ಸಂಚಾರಿಸಲು ಸಾಧ್ಯವಾಗುವುದಿಲ್ಲ, ಜನರು ನಡೆದಾಡಲು ಪರದಾಡಬೇಕಾಗಿದೆ. ಈ ರಸ್ತೆಗೆ ಮುಕ್ತಿ ಕೊಡಿಸಿ ಎಂದು ಈ ಭಾಗದ ನಿವಾಸಿಗಳು ಆಗ್ರಹಿಸಿದ್ದಾರೆ.