ಮಡಿಕೇರಿ, ಜು. 6: ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬಿ.ಶೆಟ್ಟಿಗೇರಿ, ಬೇತ್ರಿ ಪಾಲಂಗಾಲ, ಕ್ಲಬ್ ಮಹೇಂದ್ರ ಮತ್ತು ಹೆಗ್ಗಳ ಫೀಡರ್‍ನಲ್ಲಿ ಐಪಿಡಿಎಸ್ (ವಿದ್ಯುತ್ ಜಾಲದ ಸಮಗ್ರ ಅಭಿವೃದ್ದಿ ಯೋಜನೆ) ಹಾಗೂ ತುರ್ತು ನಿರ್ವಹಣೆ ಕಾಮಗಾರಿಯನ್ನು ನಡೆಸಬೇಕಿರುವುದರಿಂದ ತಾ.7 ರಂದು (ಇಂದು) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸ ಲಾಗುವುದು. ಬಿಟ್ಟಂಗಾಲ, ನಾಂಗಾಲ ಕುಟ್ಟಂದಿ, ವಿ. ಬಾಡಗ, ತೆಲುಗರ ಬೀದಿ, ಚಿಕ್ಕಪೇಟೆ, ಬೋಯಿಕೇರಿ, ಸುಭಾಷ್‍ನಗರ, ವಿಜಯನಗರ, ಪಂಜರಪೇಟೆ, ನಿಸರ್ಗ ಲೇಔಟ್, ಮೀನುಪೇಟೆ, ಬೇತ್ರಿ, ಮೈತಾಡಿ, ಕದನೂರು, ಕುಕ್ಲೂರು, ಕಾಕೋಟು ಪರಂಬು, ಕಡಂಗಮುರೂರು, ಪಾಲಂಗಾಲ, ಬೇಟೋಳಿ, ಆರ್ಜಿ, ಹೆಗ್ಗಳ, ಪೆರಂಬಾಡಿ ಗುಂಡಿಗೆರೆ, ರಾಮನಗರ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.