ಗೋಣಿಕೊಪ್ಪ ವರದಿ, ಜು.6 : ಪೊನ್ನಂಪೇಟೆ ತಾಲೂಕು ಸಿರಿಗನ್ನಡ ಮಹಿಳಾ ಘಟಕವು ಮಳೆಗಾಲ ವಿಶೇಷವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಆನ್‍ಲೈನ್ ಕವನ ಸ್ಪರ್ಧೆಯಲ್ಲಿ ಮಡಿಕೇರಿಯ ಯುವ ಕವಿ ಬೊಳ್ಳೇರ ಸುಮನ್ ಸೀತಮ್ಮ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕುಶಾಲನಗರದ ವೀಣಾ ಎನ್. ರಾವ್ ದ್ವಿತೀಯ, ಪಿ. ಎಸ್. ವೈಲೇಶ್ ತೃತೀಯ ಸ್ಥಾನ ಪಡೆದುಕೊಂಡರು.

ವೀರಾಜಪೇಟೆಯ ಕಾಯಪಂಡ ಟಾಟಾ ಚಂಗಪ್ಪ, ಅಮ್ಮತ್ತಿಯ ಬಾದುಮಂಡ ಬೀನಾ ಕಾಳಯ್ಯ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.

ಬೊಳ್ಳೇರ ಸುಮನ್ ಸೀತಮ್ಮ ಅವರ ‘ಧರೆಗಿಳಿದ ಮಳೆ’ ಕವನ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕುಶಾಲನಗರದ ವೀಣಾ ಎನ್. ರಾವ್ ಅವರ ‘ವರ್ಷಋತು’ ಕವನ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಡಿಕೇರಿಯ ಪಿ. ಎಸ್. ವೈಲೇಶ್ ‘ಜಾರಿ ಬಿದ್ದಿದ್ದೆ’ ಎಂಬ ಕವನ ತೃತೀಯ ಸ್ಥಾನ ಪಡೆದುಕೊಂಡಿದೆ. 40ಕ್ಕೂ ಹೆಚ್ಚಿನ ಕವಿಗಳು ಕವನ ರಚಿಸಿದ್ದರು.