ಚೆಟ್ಟಳ್ಳಿ, ಜು. 5: ಎಸ್.ಕೆ.ಎಸ್.ಎಸ್.ಎಫ್. ಕರ್ನಾಟಕ, ಜಿ.ಸಿ.ಸಿ. ಘಟಕ ಕೊಡಗು ಇವರ ಸಹಭಾಗಿತ್ವದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರನ್ನು ‘ಮರಳಿ ಗೂಡಿಗೆ ಸಾಂತ್ವನ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು, ಇದೀಗ 168 ಕನ್ನಡಿಗರನ್ನೊಳಗೊಂಡ ವಿಮಾನವು ತಾಯ್ನಾಡು ತಲುಪಿದೆ.

ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕಳುಹಿಸುವ ಸಲುವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ಘಾಟನೆಯೂ ಯು.ಎ.ಇ. ರಸ್‍ಅಲ್ ಕೈಮಾ ವಿಮಾನ ನಿಲ್ದಾಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್, ಜಿಸಿಸಿ ಕೊಡಗು ಘಟಕದ ಅಧ್ಯಕ್ಷ ಹುಸೈನ್ ಫೈಝಿ ವಹಿಸಿದ್ದರು.

ಪ್ರಯಾಣಿಕರು ಯಾವುದೇ ಗೊಂದಲಗಳಿಗೆ ಅನುವು ಮಾಡಿಕೊಡದೆ ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಟ್ಟು, ಕೊರೊನಾ ಮುಕ್ತ, ಜಿಲ್ಲೆ, ರಾಜ್ಯ ಹಾಗೂ ಕೊರೊನಾ ಮುಕ್ತ ರಾಷ್ಟ್ರ ಮಾಡುವಲ್ಲಿ ಎಸ್.ಕೆ.ಎಸ್.ಎಸ್.ಎಫ್.ನೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಯು.ಎ.ಇ ಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ರಫೀಕ್ ಕುಂಜಿಲ ಅವರ ಸೇವೆಯನ್ನು ಗುರುತಿಸಿ , ಎಸ್.ಕೆ.ಎಸ್.ಎಸ್.ಎಫ್ ಜಿ.ಸಿ.ಸಿ ಕೊಡಗು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಜಿ.ಸಿ.ಸಿ ಕೊಡಗು ಘಟಕದ ಸದಸ್ಯರಾದ ಯಹ್ಯಾ ಕೊಡ್ಲಿಪೇಟೆ, ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಪ್ರಮುಖ ಶಾಫಿ ಪೆರುವಾಯಿ,ಮೀಡಿಯಾ ವಿಂಗ್ ಸದಸ್ಯ ಅಬ್ದುಲ್ ರಜಾಕ್, ಇರ್ಷಾದ್ ಕೂಡಿಗೆ, ಮೀಡಿಯಾ ವಿಂಗ್ ಪ್ರಮುಖ ಶಫೀಖ್ ನೆಲ್ಲಿಹುದಿಕೇರಿ, ಬಷೀರ್ ಚೇರಂಬಾಣೆ, ರಶೀದ್ ವಾಲ್ನೂರು-ತ್ಯಾಗತ್ತೂರು, ಖಮರುದ್ದೀನ್ ಸೌದಿ, ರಜಾಕ್ ಫೈಜಿ ಹಾಗೂ ಜಿ.ಸಿ.ಸಿ ಕೊಡಗು ಘಟಕದ ಸದಸ್ಯರು ಇದ್ದರು.