ಮಡಿಕೇರಿ, ಜು. 5: ಕೊರೊನಾದಿಂದ ಸತ್ತಾಗ ಇನ್ಸೂರೆನ್ಸ್, ಪೆನ್ಷನ್ ತಿನ್ನೋ ಹೆಂಡತಿ ಮಕ್ಕಳೇ ಮುಟ್ಟೋದಿಕ್ಕೆ ಹತ್ತಿರ ಬರದಿದ್ದಾಗ ಬಿ.ಬಿ.ಎಂ.ಪಿ, ನಗರಸಭೆ, ಪುರಸಭೆಯ, ಆರೋಗ್ಯ ಇಲಾಖೆಯ ಕೆಳಹಂತದ ‘ಡಿ’ ಗ್ರೂಪ್ ನೌಕರರು ತಮ್ಮದಲ್ಲದ ಕೆಲಸವನ್ನು ಜೀವದ ಹಂಗು ತೊರೆದು ಮಾಡುತ್ತಿರುವುದು ಸ್ಮರಣೀಯವೇ ಸರಿ...
ಕಳೆದೆರಡು ದಿನದಿಂದ ಮೊಸರಲ್ಲಿ ಕಲ್ಲು ಹುಡುಕಿದಂತೆ ಅಂತ್ಯಕ್ರಿಯೆ ಸಂದರ್ಭದ ಕೆಲವೊಂದು ವಿಡಿಯೋ ತುಣುಕುಗಳನ್ನು ಪದೇಪದೇ ತೋರಿಸುತ್ತಿರುವ ಕೆಲವು ಬುದ್ಧಿಜೀವಿ ಮಾದ್ಯಮಗಳಿಗೆ ಏನನ್ನಬೇಕು... ಶವಸಂಸ್ಕಾರ ಮಾಡುತ್ತಿರುವ ಕೆಳಹಂತದ ನೌಕರರೇನು ವೃತ್ತಿಪರ ನುರಿತರು, ಪರಿಣತರೇನು ಅಲ್ಲ.. ಸೋಂಕು ತಗುಲದಂತೆ ಸರ್ಕಾರ ಕೊಡುವ ಕಳಪೆ ಮಟ್ಟದ ಪಿಪಿಇ ಕಿಟ್ ಧರಿಸಿ ಭಯದಲ್ಲಿಯೇ ಶವಸಂಸ್ಕಾರ ಮಾಡುತ್ತಿದ್ದಾರೆ.. ಆ ಕಿಟ್ ಧರಿಸಿಕೊಂಡು ರಕ್ತ ಸಂಬಂಧಿಕರೇ ಆ ಕೆಲಸ ಮಾಡಬಹುದಲ್ಲವೇ?
ಮನುಷÀ್ಯ ಬದುಕಿದ್ದಾಗ ಗಳಿಸಿದ ಆಸ್ತಿಪಾಸ್ತಿ, ಸಂಪತ್ತು, ಸತ್ತಮೇಲೂ ಬರುವ ಎಲ್.ಐ.ಸಿ. ಇತರೆ ಹಣ ಮಾತ್ರ ಅವರಿಗೆ, ಸಂಸ್ಕಾರ ಮಾಡಿ ಸೋಂಕು ತಗುಲಿಸಿಕೊಳ್ಳುವ ಕರ್ಮ ಪಾಪ ಈ ಬಡಪಾಯಿ ನೌಕರರಿಗೆ.. ಇನ್ನೂ ನಮ್ಮಲ್ಲೇ ಮೊದಲು, ನಮ್ಮ ಚಾನೆಲ್ ಇಂಫ್ಯಾಕ್ಟ್, ನಮ್ಮ ಪ್ರತಿನಿಧಿ ಅಲ್ಲೇ ಇದ್ದಾನೆ, ನಮ್ಮ ಸಹಾಯವಾಣಿ ಎಂದು ಪ್ರತಿನಿತ್ಯ ಹೇಳುವ ಟಿ.ವಿ. ಮಾಧ್ಯಮದವರು ಪ್ರವಾಹ ಆದಾಗ ಮಂಡಿವರೆಗೂ ನೀರಿನಲ್ಲಿ ನಿಲ್ಲುವ, ಟ್ರಾಫಿಕ್ ಜಾಮ್ ಆದಾಗ ಮಧ್ಯರಸ್ತೆಯಲ್ಲಿ ನಿಂತು ಫೆÇೀಸ್ ಕೊಡುವ ತಮ್ಮ ಪ್ರತಿನಿಧಿಗಳಿಂದ ಪಿಪಿಇ ಕಿಟ್ ಧರಿಸಿ ಶವಸಂಸ್ಕಾರ ಮಾಡಿಸಿ ‘ನಮ್ಮಲ್ಲೇ ಮೊದಲು’ ಎಂದು ತೋರಿಸಬಹುದಲ್ಲವೇ? ಇನ್ನೊಬ್ಬರನ್ನು ಜರಿಯುವ ಮೊದಲು, ಇನ್ನೊಬ್ಬರ ಹುಳುಕನ್ನು ಕೆದಕುವ ಮೊದಲು ತಾವು ಆ ಸ್ಥಾನದಲ್ಲಿ ಇದ್ದಿದ್ದರೆ ಎಂದು ಕೊಂಚ ಯೋಚಿಸಿ.. ಕೆಳಹಂತದ ಸಿಬ್ಬಂದಿಗಳನ್ನು ಗೌರವಿಸಿ..
-ಭಗವಾನ್