ಮಡಿಕೇರಿ, ಜು. 4: ಅರ್ಧದಿನದ ವ್ಯಾಪಾರ-ವಹಿವಾಟಿಗೆ ನೀಡಿದ್ದ ಕರೆ ಭಾನುವಾರಕ್ಕೆ ಅಂತ್ಯಗೊಳ್ಳಲಿದ್ದು ಸೋಮವಾರ ದಿಂದ ಜಿಲ್ಲೆಯಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳು ಮುಕ್ತವಾಗಿ ನಡೆಯಲಿವೆ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ. ದೇವಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ಅಂಬೇಕಲ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.ಕೊಡಗಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಾರಗಳನ್ನು ಮಧ್ಯಾಹ್ನ 2ರ ನಂತರ ನಿಬರ್ಂಧಿಸಿ ಸಹಕರಿಸು ವಂತೆ ಈ ಹಿಂದೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವರ್ತಕರಲ್ಲಿ ವಿನಂತಿ ಮಾಡಿ ಕೊಂಡಿದ್ದು, ಈ ಹಿನ್ನೆಲೆಯಲ್ಲಿ ಹಲವಷ್ಟು ಕಡೆಗಳಲ್ಲಿ ಉತ್ತಮ ಸ್ಪಂದನ ಲಭ್ಯವಾಗಿತ್ತು. ಕೆಲವೆಡೆ ಜಿಲ್ಲಾ ಚೇಂಬರ್‍ನ ತೀರ್ಮಾನಕ್ಕೆ ವಿರೋಧವನ್ನು ವ್ಯಕ್ತಪಡಿಸಲಾಗಿತ್ತು.
ಅಂದು ನೀಡಿದ್ದ ಕರೆ ಭಾನುವಾರಕ್ಕೆ ಅಂತ್ಯಗೊಳ್ಳಲಿದ್ದು ಸೋಮವಾರದಿಂದ ಜಿಲ್ಲೆಯಲ್ಲಿ ವ್ಯಾಪಾರಗಳು ಹಿಂದಿನಂತೆ ಪೂರ್ಣ ಅವಧಿಗೆ ನಡೆಯಲಿವೆ ಎಂದು ಚೇಂಬರ್ ಮಾಹಿತಿ ನೀಡಿದೆ.
ಆದರೂ ಪ್ರತಿ ಭಾನುವಾರ ಗಳಂದು ರಾಜ್ಯ ಸರಕಾರದ ಆದೇಶದಂತೆ ಜಿಲ್ಲೆಯಲ್ಲಿ ಕೂಡ ಸಂಪೂರ್ಣ ಲಾಕ್‍ಡೌನ್ ಮುಂದುವರಿಯಲಿದೆ.
ಸೋಮವಾರದಿಂದ ವ್ಯಾಪಾರ-ವಹಿವಾಟಿಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ, ಅಂಗಡಿ ಮುಂಗಟ್ಟುಗಳಲ್ಲಿ ಹೆಚ್ಚು ಜನಸಂದಣಿ ಸೇರದಂತೆ ನೋಡಿಕೊಳ್ಳುವುದು. ಅತ್ಯಗತ್ಯವಿದ್ದಲ್ಲಿ ಮಾತ್ರ ವ್ಯಾಪಾರ ನಡೆಸುವುದು ಒಳಿತು ಎಂದು ಚೇಂಬರ್ ಅಭಿಪ್ರಾಯ ವ್ಯಕ್ತಪಡಿಸಿದೆ. ಕೊಡಗಿನ ಜನತೆ ಜವಾಬ್ದಾರಿ ಯುತವಾಗಿ ನಡೆದುಕೊಂಡಾಗ ಮಾತ್ರ ಕೊಡಗಿನಲ್ಲಿ ಕೊರೊನಾ ಮುಕ್ತ ಜನಜೀವನ ವ್ಯಾಪಾರ-ವಹಿವಾಟು ಎಂದಿನಂತೆ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಹಕರು ಮತ್ತು ವರ್ತಕರು ಆದಷ್ಟು ಸ್ವಯಂ ನಿರ್ಬಂಧÀ ಹೇರಿಕೊಂಡು ಕೊರೊನಾ ಸಂಕಷ್ಟದಿಂದ ಹೊರಬರಲು ಪ್ರಯತ್ನಿ ಸೋಣ ಎಂದು ಚೇಂಬರ್ ಆಫ್ ಕಾಮರ್ಸ್ ಆಶಯ ವ್ಯಕ್ತಪಡಿಸಿದೆ.