ಮಡಿಕೇರಿ, ಜು. 4: ಮಡಿಕೇರಿಯ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂಬಂಧ ತಾ. 1 ರಂದು ಸಭೆ ನಡೆಸಿ ಚರ್ಚಿಸಿದ್ದು, ಈ ಬಗ್ಗೆ ಎಲ್ಲ ಮಸೀದಿಗಳ ಪ್ರಮುಖರ ಸಮ್ಮುಖದಲ್ಲಿ ತಾ. 5 ರಂದು (ಇಂದು) ಮರು ಸಭೆ ಕರೆಯಲಾಗಿದೆ ಎಂದು ಜಮಾಅತ್ ಒಕ್ಕೂಟಗಳ ಅಧ್ಯಕ್ಷ ಹನೀಫ್ ಅವರು ತಿಳಿಸಿದ್ದಾರೆ. ಇಂದಿನ ಸಭೆಯಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ್ದಾರೆ.