ಮಡಿಕೇರಿ, ಜು. 4: ಕಳೆದ 24 ಗಂಟೆಗಳಲ್ಲಿ ಜಿಲ್ಲೆಗೆ ಸರಾಸರಿ 1.44 ಇಂಚು ಮಳೆ ಬಿದ್ದಿದೆ. ಇದುವರೆಗೆ ಒಟ್ಟು ಈ ಸಾಲಿನಲ್ಲಿ 16.44 ಇಂಚು ಮಳೆಯಾಗಿದೆ. ಕಳೆದ ವರ್ಷ 12.15 ಇಂಚು ದಾಖಲಾಗಿತ್ತು. ಹಿಂದಿನ 24 ಗಂಟೆಗಳಲ್ಲಿ ಮಡಿಕೇರಿ ತಾಲೂಕಿಗೆ 2.02 ಇಂಚು ಸರಾಸರಿ ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 0.84 ಇಂಚು ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 1.47 ಇಂಚು ಮಳೆಯಾಗಿದೆ.ಮಡಿಕೇರಿ ವ್ಯಾಪ್ತಿಯಲ್ಲಿ 1.37 ಇಂಚು, ನಾಪೋಕ್ಲು 2.4 ಇಂಚು, ಸಂಪಾಜೆ 2.95 ಇಂಚು, ಭಾಗಮಂಡಲ 1.73 ಇಂಚು, ತಲಕಾವೇರಿ 2.50 ಇಂಚು ಮಳೆಯಾಗಿದೆ. ವೀರಾಜಪೇಟೆ 1.81 ಇಂಚು, ಹುದಿಕೇರಿ 1.97 ಇಂಚು, ಪೊನ್ನಂಪೇಟೆ 1.35 ಇಂಚು, ಶ್ರೀಮಂಗಲ 1.57 ಇಂಚು, ಅಮ್ಮತ್ತಿ 1.35 ಇಂಚು, ಬಾಳೆಲೆ 0.78 ಇಂಚು ಮಳೆ ಬಿದ್ದಿದೆ. ಸೋಮವಾರಪೇಟೆ 0.71 ಇಂಚು, ಕೊಡ್ಲಿಪೇಟೆ 0.81 ಇಂಚು, ಶನಿವಾರಸಂತೆ 0.65, ಶಾಂತಳ್ಳಿ 1.67 ಇಂಚು, ಕುಶಾಲನಗರ 0.45, ಸುಂಟಿಕೊಪ್ಪ 0.75, ಹಾರಂಗಿ 0.53 ಇಂಚು ಮಳೆಯಾಗಿದೆ.
ಸಿದ್ದಾಪುರ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಹಾಗೂ ಸಿದ್ದಾಪುರ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಿದ್ದಾಪುರದ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಈಗಾಗಲೇ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಭಾಗದ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಂದಾಯ ಇಲಾಖೆ ವತಿಯಿಂದ ಸೂಚನೆ ನೀಡಲಾಗಿದೆ.