ಮಡಿಕೇರಿ, ಜು. 4: ಕಾಡಾನೆ ದಾಳಿಗೊಳಗಾಗಿ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಕೊಳತ್ತೋಡು-ಬೈಗೋಡು ಚೋಕಂಡಳ್ಳಿ ಮುಖ್ಯ ರಸ್ತೆಯಲ್ಲಿ ಇಂದು ರಾತ್ರಿ ಸುಮಾರು 7.30ರ ವೇಳೆಗೆ ಮೂರ್ನಾಲ್ಕು ಮಂದಿ ತೆರಳುತ್ತಿದ್ದ ಸಂದರ್ಭ ದಿಢೀರನೆ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಮಾದ (50) ಎಂಬವರನ್ನು ತೋಟಕ್ಕೆ ಎಳೆದೊಯ್ದ ಕಾಡಾನೆ, ಗಂಭೀರವಾಗಿ ದಾಳಿ ಮಾಡಿದೆ.

ಈ ವೇಳೆ ಜೊತೆಗಿದ್ದ ಮಂದಿ ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಪಟಾಕಿ ಸಿಡಿಸಿದ್ದಾರೆ. ಈ ಸಂದರ್ಭ ಕಾಡಾನೆ ಘೀಳಿಡುತ್ತಿತ್ತು. ಕೆಲಹೊತ್ತಿನ ಬಳಿಕ ಹುಡುಕಾಟ ನಡೆಸಿದಾಗ ಮಾದ ತೋಟದಲ್ಲಿ ನರಳಾಡುತ್ತಿದ್ದ ಶಬ್ಧ ಕೇಳಿ ಗ್ರಾಮಸ್ಥರು ಕೂಡಲೇ ಅವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸಿದ್ದಾರೆ.