ಮಡಿಕೇರಿ, ಜು.4: ಹೊಸದಾಗಿ ಎಪಿಎಲ್(ಆದ್ಯೇತರ) ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರು ತಾಲೂಕು ಕಚೇರಿಯ ಆಹಾರ ಶಾಖೆಗೆ ಬಂದು ಅನುಮೋದನೆ (ಅಪ್‍ಡೇಟ್) ಮಾಡಿಸಿಕೊಳ್ಳತಕ್ಕದ್ದು. ಅನುಮೋದನೆ ಮಾಡಿಸಿಕೊಳ್ಳದ ಎಪಿಎಲ್ ಅರ್ಜಿಗಳು ಜುಲೈ 31 ರೊಳಗೆ ಆಹಾರ ಇಲಾಖೆಯ ಆನ್‍ಲೈನ್ ತಂತ್ರಾಂಶದಿಂದ ರದ್ದಾಗುತ್ತದೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರರು ಮತ್ತು ತಾಲೂಕು ದಂಡಾಧಿಕಾರಿ ನಂದೀಶ್ ಅವರು ತಿಳಿಸಿದ್ದಾರೆ.