ಸೋಮವಾರಪೇಟೆ, ಜು. 4: ತಾಲೂಕಿನ ಸೂರ್ಲಬ್ಬಿ ಗ್ರಾಮ ನಿವಾಸಿ, ಪೆÇೀಸ್ಟಲ್ ಅಸಿಸ್ಟೆಂಟ್ ಆಗಿದ್ದ ಎ.ಯು. ಮಹೇಶ್ (32) ಅವರು ಜೂ.29 ರಿಂದ ಕಾಣೆಯಾಗಿರುವದಾಗಿ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೂರ್ಲಬ್ಬಿ ಗ್ರಾಮದ ಅಪ್ಪುಡ ಉತ್ತಯ್ಯ ಅವರು ಈ ಬಗ್ಗೆ ದೂರು ನೀಡಿದ್ದು, ನನ್ನ ಮಗ ಮನೆಯಿಂದ ಅಂದು ಬೆಳಿಗ್ಗೆ 8 ಗಂಟೆಗೆ ಚೆಯ್ಯಂಡಾಣೆಯ ಅಂಚೆ ಕಚೇರಿ ಕೆಲಸಕ್ಕೆಂದು ಹೋದವನು ವಾಪಾಸ್ಸು ಬಂದಿಲ್ಲವೆಂದು ತಿಳಿಸಿದ್ದಾರೆ.

ಆದರೆ ತೋಟದ ಶೆಡ್‍ನಲ್ಲಿ ಅವನಿಗೆ ಸೇರಿದ ಬೈಕ್, ಬ್ಯಾಗ್, ಮೊಬೈಲ್, ಪರ್ಸ್, ಜರ್ಕಿನ್ ಇದ್ದು, ಚೆಯ್ಯಂಡಾಣೆಯ ಅಂಚೆ ಕಚೇರಿಗೆ ಹೋಗಿಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕನ್ನಡ, ಕೊಡವ ಭಾಷೆ ಮಾತನಾಡುವ ಮಹೇಶ್, 5.4 ಅಡಿ ಎತ್ತರವಿದ್ದು, ಪತ್ತೆಯಾದಲ್ಲಿ 08272-22900, 08276- 282040,284840 9480804952 ಸಂಖ್ಯೆಗಳಿಗೆ ಮಾಹಿತಿ ನೀಡಲು ಠಾಣಾಧಿಕಾರಿ ಶಿವಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.