ಮುಳ್ಳೂರು, ಜು. 4: ನಿಡ್ತ ಗ್ರಾ.ಪಂ.ವ್ಯಾಪ್ತಿಯ ಮುಳ್ಳೂರು ಗ್ರಾಮದಲ್ಲಿ ಕೋವಿಡ್ ಸೋಂಕು ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗ್ರಾಮದ ಬೀದಿಯೊಂದನ್ನು ಸೀಲ್ಡೌನ್ ಮಾಡಿದ್ದು, ಈ ಪ್ರದೇಶದ 37 ಕುಟುಂಬಗಳಿಗೆ ಮುಳ್ಳೂರು ಗ್ರಾಮದ ನಿವಾಸಿ ಮಾಜಿ ಗ್ರಾ.ಪಂ.ಸದಸ್ಯ ಎಂ.ಎಸ್.ಯೋಗೇಶ್ ಅವರ ಪತ್ನಿ ಹೇಮ ಯೋಗೇಶ್ ಉಚಿತವಾಗಿ ತರಕಾರಿಗಳನ್ನು ವಿತರಣೆ ಮಾಡಿದರು.