ಶ್ರೀಮಂಗಲ, ಜು. 4: ಬಿ.ಶೆಟ್ಟಿಗೇರಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕೊರೊನಾ ಸಾಂಕ್ರಾಮಿಕ ರೋಗ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿ.ಶೆಟ್ಟಿಗೇರಿಯಲ್ಲಿ ಜನಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು ಸಂಘದ ಪದಾಧಿಕಾರಿಗಳು, ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೊರೊನಾವನ್ನು ತಡೆಗಟ್ಟಲು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ವರು ಒಗ್ಗೂಡಿ ಶ್ರಮಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
ಇದೇ ಸಂದರ್ಭ ಸ್ಥಳೀಯ ಆಶಾಕಾರ್ಯಕರ್ತೆಯರಿಗೆ ಪೆÇ್ರೀತ್ಸಾಹ ಧನವನ್ನು ವಿತರಿಸಲಾಯಿತು. ವಿಶೇಷವಾಗಿ ಹೊರಗಡೆಯಿಂದ ಪ್ರವಾಸಿಗರು ಬಂದು ಮೋಜು ಮಸ್ತಿ ಮಾಡುವವರ ಮೇಲೆ ನಿಗಾ ಇಡುವಂತೆ, ಮೀನು ವ್ಯಾಪಾರಿಗಳು ಹಾಗೂ ತರಕಾರಿ, ಮಾಂಸ ವ್ಯಾಪಾರಿಗಳು ಕೂಡ ಈ ಭಾಗಕ್ಕೆ ಬರುತಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಭಿವೃದ್ದಿ ಅಧಿಕಾರಿಗಳಿಗೆ ತಿಳಿಸಲಾಯಿತು. ಅಲ್ಲದೆ ಕೊರೊನಾ ಪೀಡಿತ ಪ್ರದೇಶ ಭಾಗದಿಂದ ಬರುವ ತೋಟಕಾರ್ಮಿಕರನ್ನು ನಿಯಂತ್ರಿಸಲು ತೋಟ ಮಾಲೀಕರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು. ಸಾರ್ವಜನಿಕರು ಹಲವು ಸಲಹೆ ಸೂಚನೆಗಳನ್ನು ನೀಡಿದರು. ಸದರಿ ಸಭೆಯಲ್ಲಿ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ವಿದ್ಯಾರ್ಥಿ ಸಂಘದ ಸಲಹಾ ಸಮಿತಿಯ ಸದಸ್ಯರಾದ ಲಾಲಾ ಭೀಮಯ್ಯ, ಕುಸುಮ ಜೋಯಪ್ಪ, ಎನ್.ಜಿ.ದಾದ, ಮದ್ರೀರ ಗಿರೀಶ್, ಸಂಘದ ಅಧ್ಯಕ್ಷ ನಾಮೇರ ದೀಪಕ್, ಕಾರ್ಯದರ್ಶಿ ಲಿತಿನ್ ಹಾಗೂ ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.