ಮಡಿಕೇರಿ, ಜು. 2: ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರಿ (ಮೂಡಾ) ಅಧ್ಯಕ್ಷಗಿರಿ ಪ್ರತಿಷ್ಠೆಯ ಸ್ಥಾನವಾಗಿದ್ದು, ಹಲವಷ್ಟು ಸಮಯದಿಂದ ನೆನೆಗುದಿಗೆ ಬಿದ್ದಿರುವ ಈ ‘ಪಟ್ಟ’ಕ್ಕಾಗಿ ಭಾರೀ ಪೈಪೋಟಿ ತೆರೆಮರೆಯಲ್ಲಿ ನಡೆಯುತ್ತಿರುವ ಕುರಿತು ತಿಳಿದುಬಂದಿದೆ. ಈ ಸ್ಥಾನಕ್ಕಾಗಿ ಕೆಲವಾರು ಆಕಾಂಕ್ಷಿಗಳ ಹೆಸರು ಅಲೆಯಲೆಯಾಗಿ ತೇಲಿ ಬಂದಿದ್ದು ಹಲವಾರು ಬೆಳವಣಿಗೆಗಳ ಬಳಿಕ ಇದೀಗ ಬಹುತೇಕ ಅಂತಿಮ ಘಟಕ್ಕೆ ತಲುಪಿದೆ ಎನ್ನಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಅಧ್ಯಕ್ಷರು ಯಾರು ಎಂಬ ಕುರಿತು ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.ಮಡಿಕೇರಿ, ಜು. 2: ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರಿ (ಮೂಡಾ) ಅಧ್ಯಕ್ಷಗಿರಿ ಪ್ರತಿಷ್ಠೆಯ ಸ್ಥಾನವಾಗಿದ್ದು, ಹಲವಷ್ಟು ಸಮಯದಿಂದ ನೆನೆಗುದಿಗೆ ಬಿದ್ದಿರುವ ಈ ‘ಪಟ್ಟ’ಕ್ಕಾಗಿ ಭಾರೀ ಪೈಪೋಟಿ ತೆರೆಮರೆಯಲ್ಲಿ ನಡೆಯುತ್ತಿರುವ ಕುರಿತು ತಿಳಿದುಬಂದಿದೆ. ಈ ಸ್ಥಾನಕ್ಕಾಗಿ ಕೆಲವಾರು ಆಕಾಂಕ್ಷಿಗಳ ಹೆಸರು ಅಲೆಯಲೆಯಾಗಿ ತೇಲಿ ಬಂದಿದ್ದು ಹಲವಾರು ಬೆಳವಣಿಗೆಗಳ ಬಳಿಕ ಇದೀಗ ಬಹುತೇಕ ಅಂತಿಮ ಘಟಕ್ಕೆ ತಲುಪಿದೆ ಎನ್ನಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಅಧ್ಯಕ್ಷರು ಯಾರು ಎಂಬ ಕುರಿತು ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
ಚಲಾವಣೆಯಾಗಿತ್ತಾದರೂ, ಇದೀಗ ಪಿ.ಡಿ. ಪೊನ್ನಪ್ಪ v/s ರಮೇಶ್‍ಹೊಳ್ಳ ಎಂಬ ಹಂತಕ್ಕೆ ಬಂದು ನಿಂತಿದೆ ಎನ್ನಲಾಗಿದೆ.
ಇಲ್ಲಿ ಮತ್ತೊಂದು ಪ್ರತಿಷ್ಠೆಯಾಗಿ ರುವುದು ಬಿಜೆಪಿ ಪಕ್ಷ ಹಾಗೂ ಸಂಘ ಪರಿವಾರದ ನಿಲುವು ಎಂಬದೂ ಕೇಳಿ ಬರುತ್ತಿರುವ ಮತ್ತೊಂದು ವಿಚಾರ.
ಶಾಸಕರ ಶಿಫಾರಸು - ಸಿ.ಎಂ. ಕೂಡ ಹಸಿರು ನಿಶಾನೆ
ಮೂಢಾ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ ಹಾಗೂ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಅವರುಗಳು ಕಳೆದ ಮಾರ್ಚ್ ಆರಂಭದಲ್ಲೇ ಜಂಟಿಯಾಗಿ ಪಿ.ಡಿ. ಪೊನ್ನಪ್ಪ ಅವರ ಹೆಸರನ್ನು ಶಿಫಾರಸು ಮಾಡಿ ಅಧಿಕೃತ ಆದೇಶ ಹೊರಡಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೋರಿದ್ದರು. ಇದಕ್ಕೆ ಸಿಎಂ ಕೂಡ ಒಪ್ಪಿಗೆ ನೀಡಿ ಅದೇ ಪತ್ರದಲ್ಲಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳಿಗೆ ಈ ಕುರಿತು ಅಧಿಕೃತ ಆದೇಶ ಹೊರಡಿಸುವಂತೆ ಸೂಚಿಸಿ ಸಹಿ ಮಾಡಿದ್ದರೆನ್ನಲಾಗಿದೆ. ಆದರೆ ಈ ಪ್ರಕ್ರಿಯೆ ನಡೆದು ಇದೀಗ ಮೂರು ತಿಂಗಳು ಕಳೆದಿದ್ದರೂ ಇದು ಈಡೇರಿಲ್ಲ. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಅವರು ಕೂಡ ಫೆಬ್ರವರಿಯಲ್ಲೇ ಪಕ್ಷದ ಮೂಲಕ ಪೊನ್ನಪ್ಪ ಹೆಸರು ಸೂಚಿಸಿ ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಿದ್ದರು.
ಒಳ ಮರ್ಮವೇನು...?
ಮೂವರು ಶಾಸಕರು ಜಂಟಿಯಾಗಿ ಪೊನ್ನಪ್ಪ ಹೆಸರು ಶಿಫಾರಸು ಮಾಡಿದ ಬಳಿಕ ಇದಕ್ಕೆ ಸಂಘ ಪರಿವಾರದ ಕೆಲವರು ತೊಡರುಗಾಲು ಹಾಕಿರುವ ಕುರಿತು ಮಾತು ಕೇಳಿ ಬಂದಿದ್ದು, ರಮೇಶ್ ಹೊಳ್ಳ ಹೆಸರು ತಳಕು ಹಾಕಿಕೊಂಡಿದೆ. ಮಾತ್ರವಲ್ಲ ಮೂವರು ಶಾಸಕರ ಪೈಕಿ ಓರ್ವ ಶಾಸಕರು ತಮ್ಮ ಹಿಂದಿನ ನಿಲುವು ಬದಲಿಸಿ ಪಿ.ಡಿ. ಪೊನ್ನಪ್ಪ ಅವರಿಗೆ ಪ್ರಸ್ತುತ ಸಹಮತ ವ್ಯಕ್ತಪಡಿಸುತ್ತಿಲ್ಲ ಎಂಬ ದಟ್ಟ ವದಂತಿಯೂ ಇದೀಗ ಕೇಳಿ ಬರುತ್ತಿದೆ. ಈ ರಾಜಕೀಯ ಒಳಹೊರಣ ಹಾಗೂ ಸಂಘದ ವಿಭಿನ್ನ ನಿಲುವಿನ ಕಾರಣದಿಂದಾಗಿ ಅಧ್ಯಕ್ಷ ಸ್ಥಾನದ ಘೋಷಣೆ ತಡವಾಗುತ್ತಿದೆ ಎಂದು ತಿಳಿದುಬಂದಿದೆ.
(ಮೊದಲ ಪುಟದಿಂದ) ಪ್ರಸ್ತುತ ತೀವ್ರ ಸ್ಪರ್ಧೆ - ಒತ್ತಡಗಳು ಮುಂದುವರಿದಿದ್ದು ಈ ಗೊಂದಲ ನಿವಾರಣೆಯಾಗಬೇಕಿದೆ.
ಮೂರನೆಯ ವ್ಯಕ್ತಿಯ ಸಾಧ್ಯತೆ
ಇಬ್ಬರು ಪ್ರಬಲ ಆಕಾಂಕ್ಷಿಗಳು ಹಾಗೂ ಪರ-ವಿರೋಧಗಳ ರಾಜಕೀಯ ಚದುರಂಗದಾಟದ ನಡುವೆ ಮೂರನೆಯ ವ್ಯಕ್ತಿ ಆಯ್ಕೆಗೊಂಡರೂ ಅಚ್ಚರಿಯಿಲ್ಲ ಎಂಬ ಮಾತು ಮತ್ತೊಂದೆಡೆಯಿಂದ ಕೇಳಿ ಬರುತ್ತಿದೆ. ಈ ಮೂರನೆಯ ‘ವ್ಯಕ್ತಿ’ ಯಾರಿರಬಹುದು ಎಂಬದೂ ಕುತೂಹಲ ಸೃಷ್ಟಿಸಿದೆ. ಕೆಲವು ಮೂಲಗಳ ಪ್ರಕಾರ ಮೋಹನ್ ಮೊಣ್ಣಪ್ಪ ಹಾಗೂ ಮತ್ತೋರ್ವರ ಹೆಸರೂ ಚರ್ಚೆಗೆ ಬಂದಿವೆ. ಬೆಳವಣಿಗೆಗಳನ್ನು ಕಾದು ನೋಡಬೇಕಷ್ಟೆ.ಸಿ.ಎಂ. ಆದೇಶವೇ ಜಾರಿಗೊಂಡಿಲ್ಲ
ಪಿ.ಡಿ. ಪೊನ್ನಪ್ಪ ಅವರನ್ನು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲು ಸಂಬಂಧಪಟ್ಟವರಿಗೆ ಸೂಕ್ತ ಸೂಚನೆ ನೀಡುವಂತೆ ಮಾರ್ಚ್‍ನಲ್ಲೆ ಶಾಸಕತ್ರಯರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ ಅವರುಗಳು ಮುಖ್ಯಮಂತ್ರಿಗೆ ಪತ್ರ ಬರೆದು ಕೋರಿದ್ದರು. ಇದಕ್ಕೆ ಮಾ. 12ರಂದು ಸಿಎಂ ಯಡಿಯೂರಪ್ಪ ಅವರು ಕೂಡಲೇ ನಾಮನಿರ್ದೇಶನ ಮಾಡಿ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದ್ದರು. ಆದರೆ ಇದು ಈ ತನಕವೂ ಜಾರಿಯಾಗದಿರುವುದು ಕುತೂಹಲಕಾರಿಯಾಗಿದೆ. ಸಿಎಂ ಆದೇಶ ಜಾರಿಯಾಗದಿರಲು ಕಾರಣಗಳೇನು ಎಂಬದು ಚರ್ಚಾಸ್ಪದವಾಗಿದೆ.